ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಅರ್ಥಪೂರ್ಣವಾಗಿ, ದ್ದೂರಿಯಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರಾದ ಲೋಕೇಶ್ ರವರು, ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ, ಸಂವಿಧಾನ ಶಿಲ್ಪಿ ವಿಶ್ವ ಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನ ನೀಡಿದಂತಹ ಮಹಾ ನಾಯಕನಿಗೆ ನಾವೆಲ್ಲರೂ ಸಹ ಗೌರವಿಸಬೇಕು. ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು. ಶಿಕ್ಷಣ, ಸಂಘಟನೆ, ಹೋರಾಟ, ಎಂಬ ಮೂರು ಸೂತ್ರಗಳನ್ನು ನಾವೆಲ್ಲರೂ ಅನುಸರಿಸಬೇಕೆಂದು ತಿಳಿಸಿದರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಬಹಳ ವಿಶೇಷವಾಗಿ ಪ್ರತಿಯೊಬ್ಬರು ಗೌರವ ಸೂಚಿತ ಸಮವಸ್ತ್ರಗಳನ್ನು ಧರಿಸಿ, ಜೈ ಭೀಮ್ ಘೋಷಣೆ ಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ, ಬೆಳ್ಳಿ ರಥದ ವಾಹನದ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜೊತೆಗೆ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯನ್ನು ಸಹ ಆಚರಿಸಿ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಜಿತ್ ಜೈನ್. ಶ್ರೀಮತಿ ಉಷಾ ಶ್ರೀನಿವಾಸ್. ಶ್ರೀನಿವಾಸ್ (ಕಾಳಿ). ಹಾಗೂ ಹಿರಿಯ ಮುಖಂಡರಾದ ಮರಿಯಪ್ಪ. ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಪುಟ್ಟರಾಜು. ಕಾರ್ಯದರ್ಶಿ ಮಂಜುನಾಥ್. ಖಜಾಂಚಿ ಇಂದ್ರ. ಪತ್ರಕರ್ತ ಸಚಿನ್ ಮಾಯಸಂದ್ರ. ಆರಕ್ಷಕ ಇಲಾಖೆ ಚನ್ನಕೇಶವಸ್ವಾಮಿ,ಸೇರಿದಂತೆ ಸಂಘದ ಸರ್ವ ಸದಸ್ಯರು ಮುಖಂಡರು, ಯುವಕರು,ಮಹಿಳೆಯರು, ಗ್ರಾಮಸ್ಥರು, ಸೇರಿದಂತೆ, ಪುಟಾಣಿ ಮಕ್ಕಳು ಸಹಾ ಪಾಲ್ಗೊಂಡಿದ್ದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5