ತುಮಕೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಮಂದರಗಿರಿ ಜೈನ ಕ್ಷೇತ್ರಕ್ಕೆ ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಭೇಟಿ ನೀಡಿ ಶ್ರೀ ಚಂದ್ರನಾಥ ತೀರ್ಥಂಕರು, ಶ್ರೀ ಶಾಂತಿಸಾಗರ ಮಹಾರಾಜರ ಪಿಂಚಿ ಮಂದಿರ ಇನ್ನಿತರ ಬಸದಿಗಳ ದರ್ಶನ ಪಡೆದರು.
ಶ್ರೀ ಕ್ಷೇತ್ರದಲ್ಲಿ ವಾಸ್ತವ್ಯವಿರುವ ಜೈನ ಮುನಿ ಶ್ರೀ ಅಮಿತ ಸಾಗರ್ ಮಹಾರಾಜ್ ಜಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸೊಗಡು ಶಿವಣ್ಣ ,ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮoದಿರ ಸಮಿತಿಯ ಅಧ್ಯಕ್ಷ ಟಿ.ಡಿ .ಬಾಹುಬಲಿ, ಖಜಾಂಚಿ ಸುಭೋಧ ಕುಮಾರ್ ಜೈನ್, ಕಾರ್ಯದರ್ಶಿ ಟಿ.ಜೆ .ನಾಗರಾಜ್, ಉಪಾಧ್ಯಕ್ಷ ತೋವಿನಕೆರೆ ಶೀತಲ್, ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಜೈನ್ ಅಸೋಸಿಯೇಷನ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಜೆ.ನಾಗರಾಜು, ಎಸ್ .ವಿ.ಜಿನೇಶ್, ಸುನಿಲ್ ಕುಮಾರ್, ಬಿ.ಎಲ್.ಚಂದ್ರ ಕೀರ್ತಿ, ಮೋಹನ್ ಕುಮಾರ್ ಸೇರಿದಂತೆ ಇನ್ನಿತರ ಜೈನ ಮುಖಂಡರುಗಳು ಭಾಗವಹಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx