ತುಮಕೂರು : ಜಿಲ್ಲೆಯ ಮಧುಗಿರಿ ತಾಲೂಕಿನ ಚೋಳೋನಹಳ್ಳಿ ಕೆರೆಯಲ್ಲಿ ಕಳೆದ 24ರಂದು ಅದ್ದೂರಿ ತೆಪ್ಪೋತ್ಸವ ನಡೆದಿದ್ದು, ಇದೇ ಕೆರೆಯಲ್ಲಿ ಇದೀಗ ಸಹಕಾರ ಸಚಿವ ಕೆ.ಎನ್. ರಾಜಣ್ಣ 15 ದಿನಗಳ ಕಾಲ ಬೋಟಿಂಗ್ ಗೆ ಚಾಲನೆ ನೀಡಿದ್ದಾರೆ.
ಸಚಿವರು ಕೆರೆಯನ್ನು ಖುದ್ದಾಗಿ ಪರಿಶೀಲಿಸಿ, ಏರಿಯನ್ನು ಅಗಲೀಕರಣಗೊಳಿಸುವುದು, ಬಂದೋಬಸ್ತ್ ವ್ಯವಸ್ಥೆ ಮಾಡುವುದು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಜನರ ಪ್ರತಿಕ್ರಿಯೆಯನ್ನು ಆಧರಿಸಿ, ಭವಿಷ್ಯದಲ್ಲಿ ಈ ಕೆರೆಯಲ್ಲಿ ಶಾಶ್ವತ ಬೋಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಸ್ಥಳೀಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆಯನ್ನು ಸಚಿವರು ಹಾಕಿಕೊಂಡಿದ್ದಾರೆ. ಇದೆ ವೇಳೆ ಕೆರೆಯಲ್ಲಿ ಬೋಟಿಂಗ್ ಮಾಡಿ ಜಾಲಿ ಮೂಡ್ ನಲ್ಲಿ ಸಚಿವ ರಾಜಣ್ಣ ಸುತ್ತಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4