ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಪ್ರಖ್ಯಾತ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರ 70ನೇ ಜನ್ಮದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ “ಧಮ್ಮಯಾನ”, “ಆ ಮಹಾಮುಗುಳ್ನಗೆ”, “ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ” ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಲ್.ಹನುಮಂತಯ್ಯನವರು ವಹಿಸಿ, ಕೃತಿಗಳನ್ನು ಅಗ್ರಹಾರ ಕೃಷ್ಣಮೂರ್ತಿಯವರು ಬಿಡುಗಡೆ ಮಾಡಿದರು. ಪ್ರಮುಖ ಅತಿಥಿಗಳಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪ, ವಿಮರ್ಶಕರಾದ ರಘುನಾಥ ಚ. ಹ. ಉಪಸ್ಥಿತರಿದ್ದರು.
ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥ ಡಾ.ಶಿವಕುಮಾರ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಿ.ರ.ಪ್ರಕಾಶನದ ಧನಂಜಯ್ ಮತ್ತು ಆಕೃತಿ ಪ್ರಕಾಶನದ ಗುರುಪ್ರಸಾದ್ ಕೂಡ ಭಾಗವಹಿಸಿದ್ದರು.
ಡಾ.ಚಿನ್ನಸ್ವಾಮಿಯವರ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದ್ದು, ಇದಕ್ಕೆ ಬಾಲು ಜಂಬೆಯವರ ಜಂಬೆ ವಾದನ, ಸೋಸಲೆಗಂಗಾಧರ ತಂಡದ ಹಾಡುಗಳು ಹಾಗೂ ಅಕ್ಕ ಐಎಎಸ್ ಅಕಾಡೆಮಿಯ ಸಿಬ್ಬಂದಿಗಳಿಂದ ಬಡಿಸಲಾದ ಊಟವು ಮತ್ತಷ್ಟು ಸೊಗಸು ನೀಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q