ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ಕಮಲ್ ಹಾಸನ್ ಹೇಳಿಕೆಗೆ ನಾದ ಬ್ರಹ್ಮ ಹಂಸಲೇಖ ತಿರುಗೇಟು ನೀಡಿದ್ದು, ವಿಡಿಯೋ ಬಿಡುಗಡೆ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅವರು, ಮಿಸ್ಟರ್ ತಮಿಳ್ ಹಾಸನ್. ನೀವು ಮಿಸ್ಟರ್ ತಮಿಳ್ ಹಾಸನ್ ಅಂತಾ ಹೆಸರು ಬದಲಾಯಿಸಿಕೊಳ್ಳಿ ಅಂತಾ ಹೇಳಿ ಸಾರ್ ಎಂದು ನಮ್ಮ ಮ್ಯೂಸಿಕ್ ಸ್ಕೂಲ್ ಸ್ಟುಡೆಂಟ್ಸ್ ರಿಕ್ವೆಸ್ಟ್ ಮಾಡಿದ್ದಾರೆ. ಮಿಸ್ಟರ್ ತಮಿಳ್ ಹಾಸನ್, ನೋಡಿ, ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಗಾದೆ ನಮ್ಮ ಕಡೆ ಇದೆ. ಮಾತು ಎಷ್ಟು ತೊಂದರೆ ಕೊಡುತ್ತೆ ನೋಡಿ. ಸಿಎಂ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಕನಸು ಕಂಡಿದ್ದಾರೆ. ಅವರ ಕನಸಿಗೆ ನಿಮ್ಮ ಮಾತು ಸಹಾಯ ಮಾಡಬೇಕು. ನೀವು ಆ ಪಕ್ಷದ ಮಿತ್ರಪಕ್ಷ. ನೀವು ಒಳ್ಳೆ ಮಾತುಗಳನ್ನಾಡಬೇಕು. ಯೋಚಿಸಿ ಮಾತನಾಡಬೇಕು” ಎಂದಿದ್ದಾರೆ.
”ನೋಡಿ, ನಾವು ಕನ್ನಡಿಗರು. ಕನ್ನಡಿಗರು ಭಾಷಾ ಪ್ರಿಯರು. ಭಾಷಾಂಧತೆ ನಮಗಿಲ್ಲ. ನಮ್ಮ ಕನ್ನಡದ ಸಾಂಸ್ಕತಿಕ ರಾಯಭಾರಿ ಬಸವಣ್ಣ. ಅವರು ನಮಗೆ ಕೊಟ್ಟದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನಗಳು ಅಂದ್ರೆ ಮಾತು ಸ್ವಾಮಿ. ಮಾತು ಎಚ್ಚರಿಕೆಯಿಂದ ಆಡಬೇಕು. ತಮಿಳಿಗೆ ಲಿಪಿ ಕೊಟ್ಟಿದ್ದು ಕನ್ನಡ ಭಾಷೆ ಎಂದು ವಿದ್ವಾಂಸರು ಹೇಳ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ. ನಾವು ಕಲಾವಿದರು. ತೆಂಕಣ ಕಟ್ಟುವ ಕನಸು ಹೊತ್ತವರು. ಎಲ್ಲರೂ ಒಟ್ಟಾಗಿ ಬದುಕಬೇಕೆಂದು ಆಸೆ ಪಡುವ ಭಾರತೀಯರು. ಹಾಗಾಗಿ, ನೀವು ದಯವಿಟ್ಟು ಕ್ಷಮೆ ಕೇಳಿ. ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ. ಇಲ್ಲದಿದ್ದರೆ ಆ ಹಾಸನ್ ಆಗ್ತೀರಿ. ಆ ಹಾಸನ್ನಲ್ಲಿ ಮತಾಂಧತೆ, ಭಾಷಾಂಧತೆ ಅನ್ನೋ ಕೊಳೆತ ಬೀಜಗಳಿರುವ ಅನುಮಾನ ಇದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW