ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆ ಪಟ್ಟಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲೀಮರು ಗುರುವಾರದಂದು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಒಬ್ಬರಿಗೊಬ್ಬರು ತಬ್ಬಿ ಶುಭಾಷಯ ಹೇಳಿಕೊಂಡರು. ಬಳಿಕ ಸಾಮೂಹಿಕವಾಗಿ ಪುರಮೆರವಣಿಗೆ ಹೊರಟರು.
ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆ ಗಾಂಧಿವೃತ್ತಕ್ಕೆ ಬಂದು ಅಲ್ಲಾಹು ಅಕ್ಬರ್ ಮತ್ತು ಇಸ್ಲಾಂ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು. ಮುಂದುವರೆದು ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆ, ಕಾಳಿದಾಸನಗರ ರಸ್ತೆ ಮೂಲಕ ಮಸೀದಿಗೆ ಸಾಗಿದರು. ರಸ್ತೆಯುದ್ದಕ್ಕೂ ಘೋಷಣೆಗಳು ಪ್ರತಿಧ್ವನಿಸಿದವು. ಪಿಎಸ್ಐ ಮಾಳಪ್ಪ ನಾಯ್ಕೋಡ್ ಸೇರಿದಂತೆ ಪೋಲೀಸ್ ಇಲಾಖೆಯ ಸಿಬ್ಬಂದಿ ಅಗತ್ಯ ಬಂದೋಬಸ್ತು ನೀಡಿದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296