nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾಳೆ ಕೊರಟಗೆರೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರಗೆ ಮತದಾರರಿಂದ ಅಭಿನಂದನೆ

    June 13, 2026

    ತುಮಕೂರು: ಸರ್ಕಾರಿ ಐಟಿಐ ಆ.31 ರವರೆಗೆ ಪ್ರವೇಶಾವಕಾಶ | SSLC ಫೇಲ್ ಆದವರಿಗೂ ಅವಕಾಶ

    June 13, 2026

    ತುಮಕೂರು: ಹೆತ್ತೇನಹಳ್ಳಿ, ಹೊಳಕಲ್ಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೂನ್ 14ರಂದು ವಿದ್ಯುತ್ ವ್ಯತ್ಯಯ

    June 13, 2026
    Facebook Twitter Instagram
    ಟ್ರೆಂಡಿಂಗ್
    • ನಾಳೆ ಕೊರಟಗೆರೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರಗೆ ಮತದಾರರಿಂದ ಅಭಿನಂದನೆ
    • ತುಮಕೂರು: ಸರ್ಕಾರಿ ಐಟಿಐ ಆ.31 ರವರೆಗೆ ಪ್ರವೇಶಾವಕಾಶ | SSLC ಫೇಲ್ ಆದವರಿಗೂ ಅವಕಾಶ
    • ತುಮಕೂರು: ಹೆತ್ತೇನಹಳ್ಳಿ, ಹೊಳಕಲ್ಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೂನ್ 14ರಂದು ವಿದ್ಯುತ್ ವ್ಯತ್ಯಯ
    • ತುಮಕೂರು: ಜೂ.15ರಂದು ಸಂತಕವಿ ಕನಕದಾಸರ ಕುರಿತು ಸಂಗೀತ ನೃತ್ಯ ರೂಪಕ
    • ತುಮಕೂರು:  ಜೂ.14ರಂದು  ಆರೋಗ್ಯ, ಕಣ್ಣಿನ ತಪಾಸಣೆ
    • ತುಮಕೂರು: ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ಕೆಪಿಟಿಸಿಎಲ್ ಗೆ ಬೇಕಾದ ಭೂಮಿ ಖರೀದಿಗೆ ಕ್ರಮ: ಜಿಲ್ಲಾಧಿಕಾರಿ
    • ಹೇಮಾವತಿ ಎಕ್ಸ್‌’ಪ್ರೆಸ್ ಕೆನಾಲ್ ಯೋಜನೆ ಸ್ಥಗಿತಗೊಳಿಸಿ: ಸರ್ಕಾರಕ್ಕೆ ಶಾಸಕ ಜ್ಯೋತಿಗಣೇಶ್ ಒತ್ತಾಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅ.22ರಿಂದ 31ರವರೆಗೆ ಮೈಸೂರು ಸ್ಯಾಂಡಲ್ ಸಾಬೂನು ಮೇಳ: ಕೆ.ಎಸ್.ಗಂಗಪ್ಪ
    ತುಮಕೂರು October 21, 2024

    ಅ.22ರಿಂದ 31ರವರೆಗೆ ಮೈಸೂರು ಸ್ಯಾಂಡಲ್ ಸಾಬೂನು ಮೇಳ: ಕೆ.ಎಸ್.ಗಂಗಪ್ಪ

    By adminOctober 21, 2024No Comments2 Mins Read
    s k gangappa

    ತುಮಕೂರು: ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಅಕ್ಟೋಬರ್ 22 ರಿಂದ 31ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳವನ್ನು ಆಯೋಜಿಸಲಾಗಿದೆ ಎಂದು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಗಂಗಪ್ಪ ತಿಳಿಸಿದರು.

    ನಗರದ ಪತ್ರಿಕಾಭವನದಲ್ಲಿಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸಾಬೂನು ವಿಶ್ವ ವಿಖ್ಯಾತಿ ಪಡೆದಿದ್ದು, ನಮ್ಮ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.


    Provided by
    Provided by

    ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ನಮ್ಮ ಸಂಸ್ಥೆ ಹೆಚ್ಚಿನ ವಹಿವಾಟು ಹೊಂದಿದ್ದು, 2023–24 ಸಾಲಿನಲ್ಲಿ 1570 ಕೋಟಿ ರೂ. ವಹಿವಾಟು ನಡೆಸಿ ಅಂದಾಜು ನಿವ್ವಳ 362 ಕೋಟಿ ರೂ.ಗಳ ಲಾಭ ಗಳಿಸಿದೆ. ಪ್ರಸ್ತುತ ಆರ್ಥಿಕ ವರ್ಷ 2024–25ರಲ್ಲಿ ನಮ್ಮ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೆಪ್ಟೆಂಬರ್ 24ರವರೆಗಿನ ಮಾರಾಟದಲ್ಲಿ 901.39 ಕೋಟಿ ರೂ.ಗಳ ವಹಿವಾಟು ನಡೆದಿದೆ ಎಂದರು.

    ನಮ್ಮ ಸಂಸ್ಥೆಯ 19 ಉತ್ಪನ್ನಗಳು ಮೂರು ಸಲ ಸಿಎಂ ರತ್ನ ಪ್ರಶಸ್ತಿಗೆ ಭಾಜನವಾಗಿದ್ದು, ಪರಿಸರ ಸ್ನೇಹಿ ಉದ್ಯಮ ಪ್ರಶಸ್ತಿಯನ್ನು ಪಡೆದಿದೆ. ಅಲ್ಲದೆ ನಮ್ಮ ಉತ್ಪನ್ನಗಳು 20 ರಾಷ್ಟçಗಳಿಗೆ ರಫ್ತಾಗುತ್ತಿದೆ. ನಗರದಲ್ಲಿ 10 ದಿನಗಳ ಕಾಲ ನಡೆಯುವ ಸಾಬೂನು ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

    ಭಾರತದಲ್ಲಿ 6 ಕಡೆ ನಮ್ಮ ಶಾಖಾ ಕಚೇರಿಗಳಿದ್ದು, ನಮ್ಮ ಸಂಸ್ಥೆ ರಾಜ್ಯದ 900 ರೈತರೊಂದಿಗೆ ಒಡಂಬಡಿಕೆ ಮಾಡಿ ಕೊಂಡಿದೆಯಲ್ಲದೆ, 3308 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲು ನಮ್ಮ ಸಂಸ್ಥೆ ವತಿಯಿಂದ ಸಸಿಗಳನ್ನು ವಿತರಿಸಿ ಅವುಗಳನ್ನು ಬೆಳೆಸಲು ಮಾರ್ಗದರ್ಶನ, ದರ ನಿಗಧಿ, ಇತ್ಯಾದಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.

    ಶ್ರೀಗಂಧದ ಸಸಿಯನ್ನು 10 ರಿಂದ 15 ವರ್ಷಗಳ ನಂತರ ಕಟಾವಿಗೆ ಬರುತ್ತವೆ. ಅರಣ್ಯ ಇಲಾಖೆ ನಿರ್ದೇಶನದಂತೆ ಮರದ ಕಾಂಡ, ರೆಂಬೆ, ಬೇರುಗಳು ಹೀಗೆ ವಿವಿಧ ಭಾಗಕ್ಕೆ ದರ ನಿಗಧಿ ಮಾಡಲಾಗುವುದು ಎಂದರು.

    ಮೈಸೂರು ಸ್ಯಾಂಡಲ್ ಸೋಪ್ ಮೇಳದಲ್ಲಿ ಏನೆಲ್ಲಾ ಇರಲಿದೆ:

    ಮೇಳದಲ್ಲಿ ಮೈಸೂರ್ ಸ್ಯಾಂಡಲ್ ಸೋಪ್, ಗೋಲ್ಡ್, ಮೈಸೂರ್ ಸ್ಯಾಂಡಲ್ ಮಿಲೇನಿಯಂ, ಬಾಡಿವಾಷ್, ಮೈಸೂರ್ ರೋಜ್, ಬೇಬಿ ಸೋಪ್, ಗೋಲ್ಡ್ ಸಿಕ್ಸರ್, ವೇವ್ ಟರ್ಮರಿಕ್ ಸೋಪ್, ಟಾಲ್ಕ್, ಕ್ಲೀನಾಲ್, ಅಗರಬತ್ತಿಗಳು, ಧೂಪ್, ಡಿಟರ್ಜೆಂಟ್ ಪೌಡರ್, ಪಾಯಿಂಟ್ ಅಡ್ವಾನ್ಸ್ಡ್ ಲಿಕ್ವಿಡ್ ಡಿಟರ್ಜೆಂಟ್, ಹ್ಯಾಂಡ್ ವಾಶ್, ಆಯಿಲ್, ಡಿಟರ್ಜೆಂಟ್ ಕೇಕ್, ವಾಷಿಂಗ್ ಬಾರ್ ಸೋಪ್ ಮತ್ತಿತರ ಉತ್ಪನ್ನಗಳ ಪ್ರದರ್ಶನ ಇರಲಿದೆ. ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ತುಮಕೂರು: ಸರ್ಕಾರಿ ಐಟಿಐ ಆ.31 ರವರೆಗೆ ಪ್ರವೇಶಾವಕಾಶ | SSLC ಫೇಲ್ ಆದವರಿಗೂ ಅವಕಾಶ

    June 13, 2026

    ತುಮಕೂರು: ಹೆತ್ತೇನಹಳ್ಳಿ, ಹೊಳಕಲ್ಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೂನ್ 14ರಂದು ವಿದ್ಯುತ್ ವ್ಯತ್ಯಯ

    June 13, 2026

    ತುಮಕೂರು: ಜೂ.15ರಂದು ಸಂತಕವಿ ಕನಕದಾಸರ ಕುರಿತು ಸಂಗೀತ ನೃತ್ಯ ರೂಪಕ

    June 13, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ನಾಳೆ ಕೊರಟಗೆರೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರಗೆ ಮತದಾರರಿಂದ ಅಭಿನಂದನೆ

    June 13, 2026

    ಕೊರಟಗೆರೆ: ವಿಧಾನಸಭಾ ಕ್ಷೇತ್ರದ ಮತದಾರರ ಆಶೀರ್ವಾದದಿಂದ 2ನೇ ಬಾರಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಾ.ಜಿ.ಪರಮೇಶ್ವರ ರವರಿಗೆ ಕ್ಷೇತ್ರದ ಜನರಿಂದ…

    ತುಮಕೂರು: ಸರ್ಕಾರಿ ಐಟಿಐ ಆ.31 ರವರೆಗೆ ಪ್ರವೇಶಾವಕಾಶ | SSLC ಫೇಲ್ ಆದವರಿಗೂ ಅವಕಾಶ

    June 13, 2026

    ತುಮಕೂರು: ಹೆತ್ತೇನಹಳ್ಳಿ, ಹೊಳಕಲ್ಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೂನ್ 14ರಂದು ವಿದ್ಯುತ್ ವ್ಯತ್ಯಯ

    June 13, 2026

    ತುಮಕೂರು: ಜೂ.15ರಂದು ಸಂತಕವಿ ಕನಕದಾಸರ ಕುರಿತು ಸಂಗೀತ ನೃತ್ಯ ರೂಪಕ

    June 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.