ತುರುವೇಕೆರೆ: ಅಂತರಾಷ್ಟ್ರೀಯ ಹಾಗೂ ಏಶಿಯನ್ ಥ್ರೋಬಾಲ್ ಅಧೀನದಲ್ಲಿರುವ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಛತ್ತೀಸ್ಗರ್ ರಾಜ್ಯದ ಬಿಲಾಯಿ ನಗರದಲ್ಲಿ ದಿನಾಂಕ 28 –4– 2025ರಿಂದ ದಿನಾಂಕ 30—04–2025 ರವರೆಗೆ 32ನೇ ಸಬ್ ಜೂನಿಯರ್ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ.
ಈ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದ ಎಸ್ ಬಿಜಿ ಶಾಲೆಯ ವಿದ್ಯಾರ್ಥಿ ಹಾಗೂ ಕಲ್ಪನಾ ಮುನಿರಾಜು ದಂಪತಿ ಪುತ್ರ ಮನೀತ್ ಎಂ. ಹಾಗೂ ನಿವೃತ್ತ ಸೈನಿಕರು ದಿವಂಗತ ತಿಮ್ಮಾಚಾರ್ ಅವರ ಮೊಮ್ಮಗಳು ಹಾಗೂ ವಿನೋದ್ ಪುತ್ರಿ ಕುಮಾರಿ ರೀತು ಎಂ.ವಿ. ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಈ ವಿದ್ಯಾರ್ಥಿಗಳು ರಾಜ್ಯಕ್ಕೆ ಮಾತ್ರವಲ್ಲದ ರಾಷ್ಟ್ರದಲ್ಲಿಯೂ ಕೂಡ ಯಶಸ್ಸನ್ನು ಗಳಿಸಲಿ ಎಂದು ಕಲ್ಪತರು ಆಶ್ರಮದ ಶ್ರೀ ಶ್ರೀ ಪ್ರಸನ್ನ ನಾಥ ಸ್ವಾಮೀಜಿಯವರು ಪ್ರಧಾನ ಕಾರ್ಯದರ್ಶಿಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಎಸ್ ಬಿ ಜಿ ಶಾಲೆಯ ಮುಖ್ಯೋಪಾಧ್ಯಾಯರು ಎಲ್ಲ ಭೋದಕ, ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳ ಪೋಷಕರು. ಹಾಗೂ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಾಲ್ಮೀಕಿ ನಾಯಕ ಸಮಾಜ ತುರುವೇಕೆರೆ ಇವರುಗಳು ಹಾರೈಸಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4