ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಹಲವು ಹೊಸ ಪ್ರಯೋಗಗಳು ನಡೆಯುತ್ತಲೆ ಇವೆ. ಬಸ್‌ನಲ್ಲಿ ಪಾಸ್ ಗಳ ಜೊತೆಗೆ ಹೊಸ ಆಪ್ ಮೂಲಕ ಪಾಸ್ ನವೀಕರಿಸಿಕೊಳ್ಳಬಹುದು. ಈ ಮೂಲಕ ಟಿಕೆಟ್ , ಪಾಸ್ ಕಳೆದು ಹೋದ ಭಯವಿರುವುದಿಲ್ಲ.
ಈಗ ಕೆಎಸ್ ಆರ್ ಟಿಸಿ ತನ್ನ ಪ್ರಯಾಣಿಕರಿಗೆ ಹೊಸ ಅಪ್ ಡೇಟ್ ನೀಡಿದೆ. ಎಲ್ಲೆಡೆ ಯುಪಿಎ ಬಳಕೆ ಹೆಚ್ಚಾಗಿದೆ. ಇದನ್ನು ಮನಗಂಡ ಕೆಎಸ್‌ಆರ್‌ಟಿಸಿ ಕೂಡ ಬಸ್ ಗಳಲ್ಲಿ ಟಿಕೆಟ್ ಕೊಳ್ಳಲು ಯುಪಿಎ ಪಾವತಿಗೆ ಅವಕಾಶ ಮಾಡಿಕೊಡಲಿದೆ. ಈ ಜೂನ್ 25 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ ಆರ್ ಟಿಸಿ) ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದು. ಹಣವನ್ನು ತೆಗೆದುಕೊಂಡು ಹೋಗುವ ಬಗ್ಗೆ ಚಿಂತಿಸಬೇಕಾಗಿಲ್ಲ.
ಕೆಎಸ್ ಆರ್ ಟಿಸಿ ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ಎಲ್ಲಾ ಕಂಡಕ್ಟರ್‌ಗಳಿಗೆ ತರಬೇತಿ ನೀಡಿದ ನಂತರ ಕೆಲವೇ ವಾರಗಳಲ್ಲಿ ಇದನ್ನು ಎಲ್ಲಾ ಬಸ್‌ಗಳಿಗೆ ವಿಸ್ತರಿಸಲಾಗುವುದು.
ಈ ಯಂತ್ರಗಳನ್ನು ಬಳಸುವ ಕಂಡಕ್ಟರ್‌ಗಳು ಹತ್ತುವ ಮತ್ತು ಇಳಿಯುವ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು ಮತ್ತು ಪ್ರಯಾಣಿಕರ ಸಂಖ್ಯೆ ಮತ್ತು ಪಾವತಿ ವಿಧಾನವನ್ನು ಆರಿಸಬೇಕಾಗುತ್ತದೆ. ದರವನ್ನು ಯಂತ್ರ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಮೊತ್ತವನ್ನು ಪಾವತಿಸಿದ ನಂತರ ಟಿಕೆಟ್ ಸಿಗುತ್ತದೆ. ಯಂತ್ರಗಳನ್ನು ಲಾಕ್ ಮಾಡಬಹುದು. ಅವುಗಳು ಕಳ್ಳತನವಾದರೆ ಸ್ಮಾರ್ಟ್‌ಫೋನ್ ನಂತೆ ಟ್ರ್ಯಾಕ್ ಮಾಡಬಹುದು” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇವುಗಳಲ್ಲಿ ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ವ್ಯಾಲಿಡ್ ಮಾಡಲು ಕ್ಯಾಮರಾಗಳಿವೆ. ಒಂದು ವೇಳೆ ಸರ್ಕಾರವು ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದರೆ, ಅದನ್ನೂ ಇದರಲ್ಲಿ ಅಳವಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
“ಪ್ರಯೋಗಗಳ ನಂತರ, ನಾವು ಈ ತಿಂಗಳ ಅಂತ್ಯದಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಪರಿಚಯಿಸುತ್ತಿದ್ದೇವೆ. ಪ್ರಯಾಣಿಕರು ಈ ಬದಲಾವಣೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಕಂಡಕ್ಟರ್‌ಗಳು ಚಿಲ್ಲರೆ ಕೊಡುವುದಿಲ್ಲ ಎಂಬ ಬಗ್ಗೆಯೂ ಯಾವುದೇ ದೂರುಗಳಿಲ್ಲ. ಇಟಿಎಂ ಗಳೊಂದಿಗೆ, ಪ್ರಯಾಣಿಕರು GPay, PhonePe, Paytm ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸಬಹುದು” ಎಂದು ಕೆಎಸ್ ಆರ್ ಟಿಸಿ ಎಂಡಿ ಅನ್ಬು ಕುಮಾರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


