ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲಾಗುತ್ತಿರುವ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 12ರಂದು ವೈಭವದ ದಸರಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರ ಮಾರ್ಗ ಬದಲಾಯಿಸಿ ಕೆಲವು ಸ್ಥಳಗಳಲ್ಲಿ ವಾಹನಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಜಂಬೂಸವಾರಿ, 25 ಕಲಾತಂಡ, ತುಮಕೂರು ನಗರದ ದೇವರು, ವಿಂಟೇಜ್ ಕಾರು, ಅಶ್ವ, ಸಾಂಪ್ರಾಯದಾಯಿಕ ಉಡುಗೆ ತಂಡ ಪಾಲ್ಗೊಳ್ಳಲಿವೆ. ಸುಮಾರು 1.5 ಕಿ.ಮೀ.ಗಳಷ್ಟು ದೂರ ಸಾಗುವ ಮೆರವಣಿಗೆಯಲ್ಲಿ ವಿವಿಧ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು, ಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಸುಮಾರು 30,000–35,000 ಜನರು ಸೇರುವ ನಿರೀಕ್ಷೆಯಿರುವುದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಾಹನ ಸಂಚಾರ ಮಾರ್ಗವನ್ನು ಬದಲಾಯಿಸಿ ಆದೇಶ ಹೊರಡಿಸಲಾಗಿದೆ.
ಮೆರವಣಿಗೆಯು ಅಶೋಕರಸ್ತೆ, ಸ್ವತಂತ್ರ ಚೌಕ, ಕೋಡಿ ಸರ್ಕಲ್, ಅಮಾನಿಕೆರೆರಸ್ತೆ, ಕೋತಿತೋಪು ರಸ್ತೆ, ಎಸ್.ಎಸ್. ಸರ್ಕಲ್ ಮಾರ್ಗವಾಗಿ ಭದ್ರಮ್ಮ ಸರ್ಕಲ್ ಮುಖಾಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಲಿದೆ.
ತುಮಕೂರು ದಸರಾ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರದಲ್ಲಿ ಅಕ್ಟೋಬರ್ 12ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಆದೇಶ ಜಾರಿಯಲ್ಲಿರುತ್ತದೆ.
ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು:
ದಸರಾ ಮೆರವಣಿಗೆಯು ಬಿ.ಜಿ.ಎಸ್. ಸರ್ಕಲ್‌ನಿಂದ ಪ್ರಾರಂಭವಾಗುವ ಸಮಯದಲ್ಲಿ ಬಿ.ಜಿ.ಎಸ್. ಸರ್ಕಲ್ ಕಡೆಗೆ ಬರುವ ವಾಹನಗಳು ಎಸ್.ಎಸ್. ಸರ್ಕಲ್ ನಿಂದ ಕೋತಿತೋಪು ಮಾರ್ಗವಾಗಿ ಕೆ.ಇ.ಬಿ. ಸರ್ಕಲ್–ಹೊರಪೇಟೆ–ಗುಂಚಿ ಸರ್ಕಲ್-–ಚರ್ಚ್ ಸರ್ಕಲ್ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು. ದಸರಾ ಮೆರವಣಿಗೆಯ ಮುಂಭಾಗವು ಕೋಡಿ ಸರ್ಕಲ್ ಗೆ ಬಂದಾಗ ಜಿ.ಎಸ್.ಸರ್ಕಲ್ ಕಡೆಗೆ ಬರುವ ವಾಹನಗಳು ಬಿ.ಹೆಚ್.ರಸ್ತೆ ಮಾರ್ಗವಾಗಿ ಭದ್ರಮ್ಮ ಸರ್ಕಲ್, ಬಿ.ಜಿ.ಎಸ್. ಸರ್ಕಲ್ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು.
ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು:
ದಸರಾ ಮೆರವಣಿಗೆಯು ಬೆಸ್ಕಾಂ ಕಚೇರಿ ಮುಂದಕ್ಕೆ ಬಂದಾಗ ಎನ್.ಹೆಚ್–48 ರಸ್ತೆಯಿಂದ ಸತ್ಯಮಂಗಲ ಸರ್ವಿಸ್ ರಸ್ತೆಗೆ ಬಂದು ಶಿರಾಗೇಟ್–ಗಾರ್ಡನ್ ರಸ್ತೆ–ದಿಬ್ಬೂರು ರಸ್ತೆ ಜಂಕ್ಷನ್–ಗುಬ್ಬಿ ರಿಂಗ್ ರಸ್ತೆ ಜಂಕ್ಷನ್–ಗುಬ್ಬಿಗೇಟ್–ಲಕ್ಕಪ್ಪ ಸರ್ಕಲ್ ಮೂಲಕ ಬರುವುದು. ನಂತರದಲ್ಲಿ ಪೂರ್ಣ ಮೆರವಣಿಗೆಯು ಎಸ್.ಎಸ್. ಸರ್ಕಲ್‌ನಿಂದ ಭದ್ರಮ್ಮ ಸರ್ಕಲ್ ಕಡೆಗೆ ಹೋದ ನಂತರ ಎಲ್ಲಾ ವಾಹನಗಳು ಎಸ್.ಎಸ್. ಸರ್ಕಲ್–ಕೋತಿತೋಪು ರಸ್ತೆ–ಕೋಡಿ ಸರ್ಕಲ್ ಅಶೋಕ ರಸ್ತೆಗೆ ಬರುವುದು.
ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು :
ದಸರಾ ಮೆರವಣಿಗೆಯು ಬಿ.ಜಿ.ಎಸ್. ಸರ್ಕಲ್‌ನಿಂದ ಪ್ರಾರಂಭವಾಗಿ ಪ್ರಶಾಂತ ಟಾಕೀಸ್ ಬಿಟ್ಟು ಹೋಗುವವರೆವಿಗೂ ಕುಣಿಗಲ್ ಸರ್ಕಲ್ ನಿಂದ ಗುಬ್ಬಿ ರಿಂಗ್ ರಸ್ತೆ ಜಂಕ್ಷನ್, ಗುಬ್ಬಿಗೇಟ್–ಲಕ್ಕಪ್ಪ ಸರ್ಕಲ್–ಜೆ.ಸಿ ರಸ್ತೆ-ಹೆಲ್ತ್ಕ್ಯಾಂಟೀನ್ ರಸ್ತೆ ಮೂಲಕ ಹಳೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು.
ಗುಬ್ಬಿ ಗೇಟ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು: ದಸರಾ ಮೆರವಣಿಗೆಯು ಬಿ.ಜಿ.ಎಸ್. ಸರ್ಕಲ್‌ನಿಂದ ಪ್ರಾರಂಭವಾಗಿ ಪ್ರಶಾಂತ ಟಾಕೀಸ್ ಬಿಟ್ಟು ಹೋಗುವವರೆವಿಗೂ ಗುಬ್ಬಿಗೇಟ್–ಲಕ್ಕಪ್ಪ ಸರ್ಕಲ್–ಜೆ.ಸಿ ರಸ್ತೆ–ಹೆಲ್ತ್ಕ್ಯಾಂಟೀನ್ ರಸ್ತೆ ಮೂಲಕ ಹಳೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು.
ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು :
ದಸರಾ ಮೆರವಣಿಗೆಯು ಅಶೋಕ ರಸ್ತೆಗೆ ಬಂದಾಗ ಶಿರಾ ಕಡೆಯಿಂದ ಬರುವ ವಾಹನಗಳು ಶಿರಾಗೇಟ್–ಗಾರ್ಡನ್ ರಸ್ತೆ–ದಿಬ್ಬೂರುರಸ್ತೆ ಜಂಕ್ಷನ್–ಗುಬ್ಬಿರಿಂಗ್ ರಸ್ತೆ ಜಂಕ್ಷನ್–ಗುಬ್ಬಿಗೇಟ್–ಲಕ್ಕಪ್ಪ ಸರ್ಕಲ್ ಮೂಲಕ ಬರುವುದು. ಪೂರ್ಣ ಮೆರವಣಿಗೆಯು ಕೋಡಿ ಸರ್ಕಲ್‌ನಿಂದ ಕೋತಿತೋಪು ರಸ್ತೆಗೆ ಸಾಗಿದ ನಂತರ ಎಲ್ಲಾ ವಾಹನಗಳು ಕೋಡಿ ಸರ್ಕಲ್ — ಅಶೋಕ ರಸ್ತೆಗೆ ಬರುವುದು.
NO PARKING ZONE (ವಾಹನ ನಿಲುಗಡೆ ನಿಷೇಧಿತ ಪ್ರದೇಶ):
ದಸರಾ ಮೆರವಣಿಗೆ ನಿಮಿತ್ತ ಅಕ್ಟೋಬರ್ 12ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಿ.ಜಿ.ಎಸ್ ಸರ್ಕಲ್- ಚರ್ಚ್ ಸರ್ಕಲ್– ಕೋಡಿ ಸರ್ಕಲ್-ಅಮಾನಿಕೆರೆ ರಸ್ತೆ–ಕೋತಿತೋಪು ರಸ್ತೆ-ಎಸ್.ಎಸ್ ಸರ್ಕಲ್-ಭದ್ರಮ್ಮ ಸರ್ಕಲ್ –ಬಿ.ಜಿ.ಎಸ್ ಸರ್ಕಲ್-ಲಕ್ಕಪ್ಪ ಸರ್ಕಲ್–ಕುಣಿಗಲ್ ರಸ್ತೆಗಳಲ್ಲಿ ಯಾವುದೇ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಅವರು ಆದೇಶಿಸಿದ್ದಾರೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ವಾಹನ ಸವಾರರಿಗೆ ಸೂಚಿಸಲಾಗಿದೆ, ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ರೀತ್ಯಾ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q