ತುಮಕೂರು: ಮಹಾನಗರಪಾಲಿಕೆಯ 35 ವಾರ್ಡ್ ಗಳ ವ್ಯಾಪ್ತಿಯ ಉದ್ದಿಮೆದಾರರು ಕಟ್ಟಡದ ಪಾರ್ಕಿಂಗ್/ಸೆಲ್ಲರ್ ಜಾಗದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಉದ್ದಿಮೆ ನಡೆಸುತ್ತಿದ್ದು, ತಮ್ಮ ಉದ್ದಿಮೆಯನ್ನು ಸ್ಥಳಾಂತರಿಸಲು ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಸೂಚಿಸಿದ್ದಾರೆ.
ಬೆಂಗಳೂರಿನ ಲೋಕಾಯುಕ್ತ ಜಿ.ಆರ್. ಸುಧೀಂದ್ರ ಅವರಿಗೆ ದೂರು ಸಲ್ಲಿಸಿರುವ ಮೇರೆಗೆ ದೂರಿನ ಕುರಿತು ಸೂಕ್ತ ಕ್ರಮಕೈಗೊಳ್ಳಲು ಅವರು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ತಮ್ಮ ಉದ್ದಿಮೆಯನ್ನು ಕಟ್ಟಡದ ಪಾರ್ಕಿಂಗ್/ಸೆಲ್ಲರ್ ಜಾಗದಿಂದ ಸ್ಥಳಾಂತರಿಸತಕ್ಕದ್ದು, ತಪ್ಪಿದ್ದಲ್ಲಿ ತಮ್ಮ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವ/ಖಾಲಿಗೊಳಿಸುವ ನಿಟ್ಟಿನಲ್ಲಿ ಕೆ.ಎಂ.ಸಿ.ಕಾಯ್ದೆ 1976 ಕಲಂ 377ರಂತೆ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4