nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್

    November 6, 2025

    ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

    November 6, 2025

    ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

    November 6, 2025
    Facebook Twitter Instagram
    ಟ್ರೆಂಡಿಂಗ್
    • ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
    • ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
    • ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
    • ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
    • ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
    • ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
    • ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
    • ಖ್ಯಾತ ಖಳನಟ ಹರೀಶ್ ರಾಯ್  ನಿಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಡಿದ ಅಮಲಿನಲ್ಲಿ ನೀರುಪಾಲಾದ ಕುರಿಗಾಹಿ | ನುಗು ಹಿನ್ನೀರಿನಲ್ಲಿ ನೀರುಪಾಲಾದ ವ್ಯಕ್ತಿ
    ಜಿಲ್ಲಾ ಸುದ್ದಿ June 20, 2022

    ಕುಡಿದ ಅಮಲಿನಲ್ಲಿ ನೀರುಪಾಲಾದ ಕುರಿಗಾಹಿ | ನುಗು ಹಿನ್ನೀರಿನಲ್ಲಿ ನೀರುಪಾಲಾದ ವ್ಯಕ್ತಿ

    By adminJune 20, 2022Updated:June 21, 2022No Comments2 Mins Read
    nugu

    ಮೇಕೆ ಹಾಗೂ ಕುರಿ ಕಾಯುತ್ತಿದ್ದ  ಹೊಸಬೀರ್ವಾಳು ಗ್ರಾಮದ  ಸುಮಾರು 45 ವರ್ಷದ ಸಿದ್ದರಾಜು ಎಂಬುವವರು ನುಗು ಜಲಾಶಯದ ಹಿನ್ನೀರಿನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

    ಸುಮಾರು 20 ರಿಂದ 25 ಮೇಕೆ ಹಾಗೂ ಕುರಿ ಸಾಕಾಣಿಕೆ ಮಾಡಿಕೊಂಡಿದ್ದ ಇವರು ಪ್ರತಿ ನಿತ್ಯ ಜಾನುವಾರುಗಳಿಗೆ ಮೇವು ಒದಗಿಸಲು ಪಾಳು ಬಿದ್ದಿರುವ ಜಮೀನು ಹಾಗೂ ಸರ್ಕಾರಿ ಖರಾಬು ಸ್ಥಳಗಳನ್ನು ಅವಲಂಬಿಸಿದ್ದರು. ಪ್ರತಿನಿತ್ಯ ಸಿದ್ದರಾಜು ರವರು ತಮ್ಮ ಪತ್ನಿಯ ಜೊತೆ ಕಾಯಕದಲ್ಲಿ ತೊಡಗಿಕೊಂಡಿದ್ದರು ಆದರೆ ಆ ದಿನ ಅವರ ಪತ್ನಿ ಬೇರೆ ಕೆಲಸದ ನಿಮಿತ್ತ ಹುಲ್ಲಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಹಾಗಾಗಿ ಅಂದು ಅವರೊಡನೆ ಅವರ ಮೊಮ್ಮಗನಾದ ಯಶವಂತ ಜೊತೆಯಲ್ಲಿದ್ದರು. ಸ್ನಾನ ಮಾಡಿ ಬರುತ್ತೇನೆ ದಡದಲ್ಲಿಯೇ ಕುಳಿತಿರು ಎಂದು ಮೊಮ್ಮಗನಿಗೆ ಹೇಳಿ ನೀರಿಗೆ ಇಳಿದಿದ್ದಾರೆ. ಅಷ್ಟರಲ್ಲೇ ಅವರು ಮದ್ಯ ಸೇವಿಸಿದ ಕಾರಣ ನೀರಿನಲ್ಲಿ ಜಾರಿ ಬಿದ್ದಿದ್ದಾರೆ. ಸುಮಾರು 10 ರಿಂದ 15 ನಿಮಿಷಗಳ ನಂತರವೂ ಇವರು ಮೇಲೆ ಬರದಿದ್ದನ್ನು ಗಮನಿಸಿದ ಅವರ ಮೊಮ್ಮಗ ಗ್ರಾಮದ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಸ್ಥಳೀಯರ ಗಮನಕ್ಕೆ ವಿಷಯವನ್ನು ಮುಟ್ಟಿಸಿದ್ದಾನೆ.


    Provided by
    Provided by

    ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಅಲ್ಲೇ ಇದ್ದ ದೋಣಿಯ ಮೂಲಕ ಸತೀಶ, ನಂದೀಶ ಹಾಗೂ ಸಿದ್ದರಾಜು ಎಂಬುವವರು ನೀರಿಗೆ ಇಳಿದು ಅರ್ಧ ಗಂಟೆಗಳ ಕಾಲ ಶೋಧ ನಡೆಸಿ ದೇಹವನ್ನು ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಿ ಜೀವ ಹೋಗಿರುವುದನ್ನು ಗ್ರಾಮಸ್ಥರು ದೃಢ ಪಡಿಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅವರ ಪತ್ನಿ ಹಾಗೂ ಸಂಬಂಧಿಕರ ಗೋಳು ಮುಗಿಲು ಮುಟ್ಟಿತ್ತು. ತರುವಾಯ ಸಂಬಂಧಿಕರು ಶವ ಸಂಸ್ಕಾರವನ್ನು ಮಾಡಿದ್ದಾರೆ.

     

    ಈ ಬಗ್ಗೆ ಪ್ರತಿಕ್ರಿಯಿಸಿರುವ  ಗ್ರಾಮೀಣ ಮಹೇಶ್, ಮದ್ಯ ಮಾರಾಟ ಮಾಡಲು ಪರವಾನಗಿ ಇಲ್ಲದಿದ್ದರೂ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿಕೊಂಡು ಮದ್ಯಪ್ರಿಯರ ಬಳಿಗೆ ನೇರವಾಗಿ ಮದ್ಯಪಾನ ಮಾರಾಟ ಮಾಡುವವರ ಸುಳಿವನ್ನು ಸರಗೂರು ಪೊಲೀಸ್ ಠಾಣೆ ಹಾಗೂ ಅಬಕಾರಿ ಇಲಾಖೆ ಗಮನಕ್ಕೆ ತರಲಾಗಿತ್ತು. ನಾವು ನೀಡಿದ ಸುಳಿವಿನಂತೆ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಅಧಿಕಾರಿಗಳು ಬಂದು ವಿಚಾರಿಸಿಕೊಂಡು ಹೋಗಿದ್ದಾರೆ. ಅದಾದ ನಂತರ ಭಯದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳು ಬಹಳ ಧೈರ್ಯವಾಗಿ ಮಾರಾಟ ಮಾಡುತ್ತಿದ್ದಾರೆ ಅಂದರೆ ಏನು ಅರ್ಥ ? ಈ ವಿಷಯವಾಗಿ ಮೃತರ ಸಂಬಂಧಿಕರು ಒಪ್ಪಿದರೆ ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ಕೊಡಲಾಗುವುದು ಎಂದು ತಿಳಿಸಿದರು.

    admin
    • Website

    Related Posts

    ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್

    November 6, 2025

    ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

    November 6, 2025

    ಬೀದರ್ | 12 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

    November 6, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್

    November 6, 2025

    ಸರಗೂರು:  ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ  ನ.16 ರಿಂದ 18 ವರೆಗೆ ನಡೆಯಲಿದ್ದು, ಜಾತ್ರಾ  ಲಾಡು ಪ್ರಸಾದ…

    ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

    November 6, 2025

    ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

    November 6, 2025

    ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ

    November 6, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.