ಪಾವಗಡ: ಭೂಮಿಯ ಮೇಲೆ ಜನಿಸಿದ ಮೇಲೆ ಒಂದು ಸಾಧನೆಯನ್ನು ಮಾಡಿ ತಾನು ಏನೆಂದು ಸಮಾಜಕ್ಕೆ ತೋರಿಸಬೇಕು ಮತ್ತು ಪ್ರತಿಯೊಬ್ಬರು ಜಾಗೃತವಾಗುವುದರ ಜೊತೆಗೆ ಜಾಗೃತರನ್ನಾಗಿ ಮಾಡಬೇಕೆಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ಹಿರಿಯ ಲೇಖಕರಾದ ಪ್ರೊಫೆಸರ್ ಚಿತ್ತಯ್ಯ ಪೂಜಾರ್ ತಿಳಿಸಿದ್ದಾರೆ.
ಪಾವಗಡ ತಾಲೂಕಿನ ಕಿಲಾರ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಲ್ಲಿ ಪತ್ರಕರ್ತ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ ಅವರು ಬರೆದಿರುವಂತಹ “ಮೌಲ್ಯಗಳು ಮರೆಯಾಗದಿರಲಿ ಇದು ಹೆತ್ತವರ ಹೊಡಲಿನ ಕೂಗು” ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದ ಸೂತ್ರಗಳನ್ನು ನಿಗಾದಿಂದ ಗಮನಿಸಿದವರು ಮಾತ್ರ ಸಮಾಜವನ್ನು ತಿದ್ದಿ ತೀಡಲು ಮುಂದಾಗುತ್ತಾರೆ, ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸೋಂಬೇರಿಗಳ ಸಂಖ್ಯೆ ಹೆಚ್ಚುತ್ತಿದೆ ಇಂತಹವರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ ಹದಿನೈದು ಸಾವಿರಕ್ಕೆ ಬೆಂಗಳೂರಿನ ತೆರಳಿ ಕೆಲಸ ಮಾಡುವುದರ ಜೊತೆಗೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುಃಖಕರ ಸಂಗತಿ, ಕಲಾವಿದ ನವೀನ್ ಕಿಲಾರ್ಲಹಳ್ಳಿ ಯುವ ಸಮೂಹಕ್ಕೆ ಸಂದೇಶವೊಂದನ್ನು ನೀಡುತ್ತಾ ಗುರು ಹಿರಿಯರು ಹೆತ್ತ ತಂದೆ ತಾಯಿಯನ್ನು ನೋಡಿಕೊಳ್ಳಿ ಎಂದು ವಿನೂತನವಾಗಿ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಮಾದರಿಯಾಗುತ್ತಿರುವುದು ಹೆಮ್ಮೆ, ಎಲ್ಲರಲ್ಲಿ ಎಲ್ಲರಂತಿದ್ದು ಎಲ್ಲಾ ವಿಷಯಗಳನ್ನು ಎಳೆ ಎಳೆಯಾಗಿ ಬಲ್ಲವರಿಗೆ ಈಗ ಉನ್ನತ ಸ್ಥಾನ ಮತ್ತು ಮನುಷ್ಯನಿಗೆ ಕಲೆ, ಶಿಕ್ಷಣದ ಕೊರತೆ ಹೆಚ್ಚಾಗಿರುವುದರಿಂದ ದ್ವೇಷವನ್ನು ಹರಡುಲು ಮುಂದಾಗುತ್ತಿದ್ದಾನೆ, ಮಾನವನ ಆಲೋಚನೆ ಬದಲಾಗಬೇಕಾಗಿದ್ದು ಪ್ರತಿಯೊಬ್ಬರೂ ಕಲುಷಿತಗೊಂಡಿರುವಂತಹ ವಾತಾವರಣವನ್ನು ಶುದ್ಧೀಕರಿಸುವ ಅಗತ್ಯವಿದ್ದು ನವೀನ್ ಕಿಲಾರ್ಲಹಳ್ಳಿ ಅವರು ಬರೆದಿರುವಂತಹ ಪುಸ್ತಕ ಉತ್ತಮವಾಗಿದ್ದು ಇದಕ್ಕೆ ಬೆನ್ನುನುಡಿಯನ್ನು ನಾನೇ ಬರೆದಿದ್ದೇನೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಏರುವುದರ ಜೊತೆಗೆ ಅನೇಕ ಪುಸ್ತಕಗಳನ್ನ ಬರೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಪುಸ್ತಕದ ಲೇಖಕರಾದ ನವೀನ್ ಕಿಲರ್ಲಾಹಳ್ಳಿ ಮಾತನಾಡಿ, ಇಂದಿನ ಸಮಾಜ ಎತ್ತ ಸಾಗುತ್ತಿದೆ ಎನ್ನುವುದರ ಆತಂಕದಿಂದ ಮೌಲ್ಯಗಳು ಮರೆಯಾಗದಿರಲಿ ಎನ್ನುವ ಪುಸ್ತಕ ರಚಿಸಿದ್ದು ಇದರ ಹಿನ್ನೆಲೆಯಲ್ಲಿ ನನ್ನ ತಂದೆ ತಾಯಿ ಸಣ್ಣ ವಯಸ್ಸಿನಿಂದ ಅನೇಕ ಕಷ್ಟಗಳನ್ನು ಅನುಭವಿಸುತ್ತಾ ನನ್ನನ್ನು ಬೆಳೆಸಿದ್ದು ಅವರಿಗೆ ಈ ಪುಸ್ತಕವನ್ನು ಅರ್ಪಿಸುತ್ತಾ ಸಮಾಜಕ್ಕೆ ನನ್ನಿಂದಾದೆ ಕೊಡುಗೆ ನೀಡಿರುವೆ ಎಂದು ಭಾವಿಸುತ್ತೇನೆ ಎಂದು ಭಾವುಕರಾದರು.
ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಗೋವಿಂದರಾಯ ಎಂ. ಅವರು ಮಾತನಾಡುತ್ತಾ, ಇಂದಿನ ಸಮಾಜ ಹೆತ್ತವರನ್ನು ಮರೆಯುತ್ತಿರುವುದು ದೊಡ್ಡ ದುರಂತವಾಗಿದೆ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕಾದಂತಹ ಸ್ಥಾನದಲ್ಲಿ ಅನೈತಿಕತೆ ಎದ್ದು ತಾಂಡವಡುತ್ತಿದೆ, ಪೋಷಕರಾದಂತವರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಮಕ್ಕಳು ಸರಿದಾರಿಗೆ ಬರುತ್ತಾರೆ. ಈ ನಿಟ್ಟಿನಲ್ಲಿ ನವೀನ್ ಕಿಲಾರ್ಲಹಳ್ಳಿ ಉತ್ತಮ ಬರಹಗಾರರಾಗುವ ಕಡೆ ಹೆಜ್ಜೆ ಇಡುತ್ತಿದ್ದು, ಇಂದಿನ ಸಮಾಜಕ್ಕೆ ಅಗತ್ಯವಾದಂತಹ ಮೌಲ್ಯಗಳ ಕುರಿತು ಸಾರಿ ಹೇಳಿದಂತಹ ಪುಸ್ತಕವನ್ನು ರಚಿಸಿದ್ದು ಪ್ರತಿಯೊಬ್ಬರು ಇದನ್ನು ಓದಿ ಅರ್ಥೈಸಿಕೊಂಡು ಹತ್ತಾರು ಜನಕ್ಕೆ ತಿಳಿಸಬೇಕೆಂದರು.
ರೈತ ಕವಿ ಶಂಕರಪ್ಪ ಬಳ್ಳೆಕಟ್ಟೆ ಮಾತನಾಡಿ, ರಾಜ್ಯಾದ್ಯಂತ ಸಂಚರಿಸಿ ಸುಮಾರು 5 ಲಕ್ಷಕ್ಕೂ ಅಧಿಕ ಜನ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಮತ್ತು ನೈತಿಕ ಗುಣಗಳ ಬಗ್ಗೆ ಜಾಗೃತಿ ಮೂಡಿ ಸುತ್ತ ಇಂದು ಒಂದು ಪುಸ್ತಕವನ್ನೇ ಬಿಡುಗಡೆ ಮಾಡಿರುವಂಥದ್ದು ನಿಜಕ್ಕೂ ಅಭಿನಂದನೀಯ ವಿಚಾರವಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆತ್ತವರ ಬಗ್ಗೆ ಜಾಗೃತಿ ವಹಿಸಬೇಕೆಂದರು.
ಹಿರಿಯ ಸಾಹಿತಿ ಸಣ್ಣನಾಗಪ್ಪ ಮಾತನಾಡಿ, ಕಿಲಾರ್ಲಹಳ್ಳಿಯಲ್ಲಿ ಅಂದು ರಾಸುಗಳಿಗೆ ಔಷಧಿಯನ್ನು ಕೊಟ್ಟಿದ್ದು ಇದೇ ಕಾರಣಕ್ಕೆ ಈ ಗ್ರಾಮಕ್ಕೆ ಕಿಲಾರಲಹಳ್ಳಿ ಎಂದು ಹೆಸರು ಬಂದಿದೆ, ಅದೇ ರೀತಿ ಇಂದು ಯುವ ಜನಾಂಗಕ್ಕೆ ಜಾಗೃತಿಯ ಔಷಧಿಯನ್ನು ನೀಡುತ್ತಿರುವುದು ಹೆಮ್ಮೆಯಾಗಿದೆ ಎಂದು ಲೇಖಕ ನವೀನ್ ಕಾರ್ಯವನ್ನು ಮೆಚ್ಚಿದರು.
ಕಾರ್ಯಕ್ರಮದಲ್ಲಿ ಲಂಡನ್ ಡಾ. ಪ್ರಭಾಕರ್ ರೆಡ್ಡಿ, ಸಿಪಿಐ ಸುರೇಶ್, ಸಾಹಿತಿ ಡಾ. ಕರಿಯಣ್ಣ. ಮಾತನಾಡಿದರು. ಇದಕ್ಕೂ ಮೊದಲು ಗ್ರಾಮದಲ್ಲಿ ಮೌಲ್ಯಗಳು ಮರೆಯಾಗದಿರಲಿ ಪುಸ್ತಕವನ್ನು ಅನೇಕ ಕನ್ನಡ ಕಲಾಭಿಮಾನಿಗಳೊಂದಿಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ನವೀನ್ ಕಿಲಾರ್ಲಹಳ್ಳಿ ಅವರನ್ನು ವಿವಿಧ ಸಂಘ ಸಂಸ್ಥೆ ಹಾಗೂ ಕವಿಗಳಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಪಬ್ಲಿಕ್ ಟಿವಿಯ ಹಿರಿಯ ಪತ್ರಕರ್ತ ಶ್ರೀನಿವಾಸ್ ಪೊನ್ನಸಮುದ್ರ, ಮಧುಗಿರಿ ಬಿಇಓ ಹನುಮಂತರಾಯಪ್ಪ, ಕಾರ್ಮಿಕ ನಿರೀಕ್ಷಕ ಹರೀಶ್ ಕುಮಾರ್ ಎಸ್, ಲೇಖಕರ ತಂದೆ ಬಸಪ್ಪ, ತಾಯಿ ಜಯಮ್ಮ, ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx