ಈತನ ಜೊತೆ ಜಸ್ಟ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬೀಳ್ತಾರಂತೆ. ಹೌದು, ಈತನ ಜೊತೆ ಫೋಟೋ ತೆಗೆದುಕೊಳ್ಳಲು ಮೊದಲು ಈತನಿಗೆ ಲಕ್ಷಾಂತರ ರೂಪಾಯಿ ನೀಡಬೇಕಂತೆ. ಆದರೂ ಕೆಲವು ಸ್ಟಾರ್ ಗಳು ಹಣ ಪಾವತಿಸಿ ಈತನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.
ಈತ ಬೇರೆ ಯಾರೂ ಅಲ್ಲ. ಬಾಲಿವುಡ್ ಸ್ಟಾರ್ ಗಳಷ್ಟೇ ಫೇಮಸ್ ಆಗಿರುವ ಓರಿ. ಓರಿ ಎಂದು ಕರೆಯಲ್ಪಡುವ ಈ ಯುವಕನ ಹೆಸರು ಓರ್ಹನ್ ಅವತ್ರಮಣಿ. ಸದ್ಯ ಗಂಟೆ ಗಂಟೆಗೂ ಲಕ್ಷಾಂತರ ರೂಪಾಯಿ ಗಳಿಸುವ ಓರಿ ತಮ್ಮ ಗಳಿಕೆಯ ಬಗ್ಗೆ ಇತ್ತೀಚಿಗೆ ಮಾತನಾಡಿದ್ದಾರೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿರುವ ಓರಿ (Orry) ಸೆಲೆಬ್ರೆಟಿಗಳ ಖಾಸಗಿ ಕಾರ್ಯಕ್ರಮಗಳಿಗೆ ಭಾಗಿ ಆದರೆ ಒಂದು ಇವೆಂಟ್ ಗೆ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ.
ಓರಿ ಪ್ರಕಾರ, ನಾನು ಒಂದು ಫೋಟೋ ಕೇಳಿದರೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ನಾನಾಗೇ ಬಂದು ಫೋಟೋ ಕ್ಲಿಕ್ಕಿಸಿಕೊಂಡರೆ ನೋ ಚಾರ್ಜ್. ಯಾರಾದರೂ ಬಂದು ಟಚ್ ಮಾಡುವಂತೆ ಕೇಳಿದರೆ 20 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ಎಲ್ಲರೂ ಫಾರ್ಮ್ಹೌಸ್ ಗೆ ಕರೆಯುತ್ತಾರೆ. ಅಲ್ಲಿ ನನ್ನನ್ನು ಟಚ್ ಮಾಡುತ್ತಾರೆ. ದಿನಕ್ಕೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ ಎಂದು ಓರಿ ಹೇಳಿದ್ದಾರೆ.
ಅಂದಹಾಗೆ ಓರಿ ತಮ್ಮದೇ ಆದ ತಂಡ ಹೊಂದಿದ್ದು, ಈವೆಂಟ್ ಗಳನ್ನು ಮ್ಯಾನೇಜ್ ಮೆಂಟ್ ಮೂಲಕ ಹಣ ಗಳಿಸುತ್ತೇನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಅನೇಕ ಸ್ಟಾರ್ ಕಿಡ್ ಗಳ ಜೊತೆಗೂ ೋರಿ ಅವರಿಗೆ ಉತ್ತಮ ನಂಟು ಇರುವ ಕಾರಣ ಬಾಲಿವುಡ್ ನ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಓರಿ ಕೂಡ ಕಾಣಿಸಿಕೊಳ್ಳುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA