ಪಾವಗಡ: ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಪಾವಗಡ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರ ಅಧ್ಯಕ್ಷತೆಯಲ್ಲಿ ಇಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಮತ್ತು ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ರವರ ಪರವಾಗಿ ಮತ ಯಾಚನೆ ಕಾರ್ಯಕ್ರಮವನ್ನು ಪಟ್ಟಣದ ನವನಿಧಿ” ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ಸಭೆಯನ್ನುದೇಶಿಸಿ ಮಾತನಾಡಿದರು.
CWC ಸದಸ್ಯರಾದ ರಘುವೀರರೆಡ್ಡಿ, ಮಾಜಿ ಸಚಿವರಾದ ವೆಂಕಟರಮಣಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿ.ಟಿ. ಶ್ರೀನಿವಾಸ್ ರವರ ಪರವಾಗಿ ಶಿಕ್ಷಕರ ಬಳಿ ಮತ ಯಾಚಿಸಿದರು.
ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಗ್ರಾಮಾಂತರ ಅಧ್ಯಕ್ಷರಾದ ರಾಮಾಂಜಿನಪ್ಪ, ಶಂಕರ್ ರೆಡ್ಡಿ, ಮೈಲಪ್ಪ, ಸಣ್ಣರಾಮರೆಡ್ಡಿ, ವಕೀಲ ವೆಂಕಟರಾಮರೆಡ್ಡಿ,ಕೆಪಿಸಿಸಿ ಕಾರ್ಯದರ್ಶಿ ಇಬ್ರಾಹಿಂ, ಯಾದವ ಮುಖಂಡರಾದ ನರಸಿಂಹಪ್ಪ, ಪುರಸಭಾ ಸದಸ್ಯ ಗೊರ್ತಿನಾಗರಾಜು ಸೇರಿದಂತೆ ಇನ್ನೂ ಅನೇಕ ಗಣ್ಯರು, ಶಿಕ್ಷಕ ಮತದಾರರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA