ಪಾವಗಡ: ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಅವರ 65 ಹುಟ್ಟು ಹಬ್ಬವನ್ನು ಬಲ್ಲೇನಹಳ್ಳಿ ಗ್ರಾಮದಸ್ಥರು, JDS ಕಾರ್ಯಕರ್ತರು ಸರಳವಾಗಿ ಆಚರಿಸಿದರು.
ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಅಂಬೇಡ್ಕರ್ ರವರಿಗೆ ಪಾದಾಭಿನಂದನೆ ಮಾಡಿ ನಂತರ ಅಭಿಮಾನಿಗಳ ಮಧ್ಯೆ ಕೆಕ್ ಕತ್ತರಿಸುವ ಮೂಲಕ ತಮ್ಮ 65ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಅಸೆಯಂತೆ ಕೆ.ಎಂ.ತಿಮ್ಮರಾಯಪ್ಪ ಸರಳವಾಗಿ ಅಚರಿಸಿದರು.
ನಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿ ತಿಮ್ಮರಾಯಪ್ಪ ರವರಿಗೆ ಪೇಟಾ ಮತ್ತು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಮಾತನಾಡಿದ ಬಿ ಹೊಸಹಳ್ಳಿ ಮಲ್ಲಿಕಾರ್ಜುನ, ತಿಮ್ಮರಾಯಪ್ಪ SCP ಮತ್ತುTSP ಯೋಜನೆಯ ಜಾರಿಗೆ ಬರುವುದರಲ್ಲಿ ಪ್ರಮುಖರು, ಅದೇ ರೀತಿಯಲ್ಲಿ ಪಾವಗಡ ತಾಲೂಕಿಗೆ ಗುಡಿಸಲು ರಹಿತ ಮನೆಗಳು ಬರುವಂತೆ ಶ್ರಮಿಸಿದರು. ಹಾಗೆಯೇ 8 ಮುರಾರ್ಜಿ ಮತ್ತು ವಾಜಪೇಯಿ ವಸತಿ ಶಾಲೆಗಳನ್ನು ತಂದಿರುವಂತ ದಿಮಾಂತ ನಾಯಕರು ಎಂದರು.
ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಗೋಪಾಲ್, ಚನ್ನಕೇಶವ, ರಾಮಾಂಜಿ ಮಲ್ಲೇಶ, ಅಶೋಕ್, ನಾಗರಾಜಪ್ಪ, ರಾಮಣ್ಣ ಹಾಗೂ ಬಲ್ಲೇನಹಳ್ಳಿ ಗ್ರಾಮದಸ್ಥರು ಹಾಗೂ JDS ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ನಂದೀಶ್ ನಾಯ್ಕ ಪಿ. ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW