ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಆವರಣದಲ್ಲಿ ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯನ್ನು ಭಾನುವಾರ ಪಿಎಸ್ ಐ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡರು ವೈ.ಎನ್.ಹೊಸಕೋಟೆಯಿಂದ ದೊಡ್ಡಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆದಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಇದನ್ನು ಶೀಘ್ರವೇ ತೆರವುಗೊಳಿಸಬೇಕು. ಜೊತೆಗೆ ಮುಂದೆ ಅಲ್ಲಿ ತ್ಯಾಜ್ಯಗಳನ್ನು ಎಸೆದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿ ಉತ್ತರಿಸಿದ ಪಿಎಸ್ ಐ ರಾಮಚಂದ್ರಪ್ಪ ಅವರು, ವೈ.ಎನ್.ಹೊಸಕೋಟೆ ಎಲ್ಲಾ ಕೋಳಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ಮುಂದೆ ಅಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕದ ಹಾಗೆ ನೋಡುತ್ತೇವೆ. ಮುಂದೆ ಏನಾದರೂ ಕೋಳಿ ತ್ಯಾಜ್ಯ ವಸ್ತುಗಳನ್ನು ಹಾಕಿದ್ದರೆ ಅಂತವರಿಗೆ ದಂಡ ಹಾಕುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ASI ನರಸಿಂಹಮೂರ್ತಿ, ಪೊಲೀಸ್ ಪೇದೆಗಳಾದ ಸದ್ದಾಂ, ಪುಂಡಲಿ ಕೂಗಿ ಹಾಗೂ ದಲಿತ ಮುಖಂಡರು ಹಾಜರಾಗಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q