ಪಾವಗಡ : SCSP/TSP ನಿಧಿಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ SCSP/TSP ನಿಧಿ ಸದ್ಬಳಕೆ ಜನಾಂದೋಲನ — ಕರ್ನಾಟಕ ವತಿಯಿಂದ ಭಾನುವಾರ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಗೃತಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ವಕೀಲರು ಹಾಗೂ ಭಾರತೀಯ ಪರಿವರ್ತನ ಸಂಘ (BPS) ರಾಜ್ಯಾಧ್ಯಕ್ಷರಾದ ಹರಿರಾಮ್ ಎ. ಅವರು SCSP/TSP ನಿಧಿಯ ಉದ್ದೇಶ, ಬಳಕೆ ಹಾಗೂ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ಯುವ ಘಟಕದ ರಾಜ್ಯಾಧ್ಯಕ್ಷ ದೊಡ್ಡಹಳ್ಳಿ ಅಂಜಿನಾಯಕ, ಕರ್ನಾಟಕ ಭೀಮಸೇನೆ ತಾಲ್ಲೂಕು ಅಧ್ಯಕ್ಷ ಬೆಳ್ಳಿಬಟ್ಟಲು ಗ್ರಾಮದ ಹಾಲೇಶ್ ಕುಮಾರ್, ಅಲೆಮಾರಿ ಸಮುದಾಯದ ಮುಖಂಡ ವೀರಭದ್ರಪ್ಪ, ತುಮಕೂರು ಜಿಲ್ಲಾ ಲಿಡ್ಕರ್ ನಾಮನಿರ್ದೇಶಿತ ಸದಸ್ಯ ಕರೆಕ್ಯಾತನಹಳ್ಳಿ ಗ್ರಾಮದ ನಾಗರಾಜ ಕೆ.ಟಿ., BPS ತುಮಕೂರು ಜಿಲ್ಲಾಧ್ಯಕ್ಷ ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್.ಕೆಂಚರಾಯ, ಮುಖಂಡರಾದ ಹನುಮಂತರಾಯಪ್ಪ ಸೇರಿದಂತೆ ಎಸ್ಸಿ–ಎಸ್ಟಿ ಸಮುದಾಯದ ಮುಖಂಡರು, ಯುವಕರು, ನೌಕರರು ಹಾಗೂ ವಕೀಲರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಮುಖಂಡರು, SCSP/TSP ನಿಧಿಯು ಅರ್ಹ ಸಮುದಾಯದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಕೆಯಾಗುವಂತೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಮುಂದಿನ ದಿನಗಳಲ್ಲಿ ಪಾವಗಡ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿಯೂ SCSP/TSP ನಿಧಿ ಸದ್ಬಳಕೆ ಕುರಿತು ಜಾಗೃತಿ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ನ್ಯಾಯದಗುಂಟೆ ಗ್ರಾಮದ BPS ಮುಖಂಡರಾದ ಶಿವಕುಮಾರ್ ಹೆಚ್. ಅವರು ಊಟದ ವ್ಯವಸ್ಥೆ ಮಾಡಿದ್ದರು.
ಈ ಸಭೆ ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘಟಕರ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
