ಸರಗೂರು: ಮನುಗನಹಳ್ಳಿ ಪಂಚಾಯಿತಿ ಪಿಡಿಒ ಯೋಗೇಂದ್ರ ದರ್ಪದಿಂದ ಮೆರೆಯುತ್ತಿದ್ದು, ಹಾಡಹಗಲೇ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರನ್ನು ಗದರಿಸಿ ನನಗೆ ಪೆಟ್ರೋಲ್ ಗೆ ಹಣ ಕೊಡಿ, ಇಲ್ಲವಾದ್ರೆ ನಿಮ್ಮ ಕೆಲಸ ಮಾಡುವುದಿಲ್ಲ ಎಂದು ಜನರನ್ನು ಗದರಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇ ಸ್ವತ್ತು ಕೊಡಲು ಪಿಡಿಒ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಾಡು ಹಗಲೇ ಈ ರೀತಿಯಲ್ಲಿ ಲಂಚ ದಂಧೆ ನಡೆಯುತ್ತಿದ್ದರೂ ಶಾಸಕ ಅನಿಲ್ ಚಿಕ್ಕಮಾದು ಅವರು ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಬಿಲ್ ಮಾಡಿ ಪಿಡಿಒ ಹಣ ಲೂಟಿ ಮಾಡಿದ್ದಾರೆ. ಪಿಡಿಒ ಯೋಗೇಂದ್ರ ಲಂಚ ಸ್ವೀಕರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ ಮೇಲಾಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಓ ಯೋಗೇಂದ್ರ ವರ್ತನೆಯಿಂದ ಬೇಸತ್ತಿರುವ ಗ್ರಾಮಸ್ಥರು ಪಂಚಾಯತ್ ಗೆ ಇವರಿಂದ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾಯುವಂತಾಗಿದೆ. ಸಾರ್ವಜನಿಕರ ಆರೋಪಗಳನ್ನು ಪರಿಗಣನೆಗೆ ತೆಗೆದುಕೊಳ್ಳದ ಮೇಲಾಧಿಕಾರಿಗಳ ಮೇಲೆಯೂ ಗ್ರಾಮಸ್ಥರು ಅನುಮಾನಪಡುತ್ತಿದ್ದು, ಎಲ್ಲ ಅವ್ಯವಹಾರಗಳು ಗೊತ್ತಿದ್ದೇ ನಡೆಯುತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy