ವಾರಗಳ ಕಾಲ ನಡೆದ ಲೋಕಸಭಾ ಚುನಾವಣಾ ಪ್ರಚಾರವನ್ನು ಮುಗಿಸಿದ ನಂತರ ಮೇ 30 ರಿಂದ ಜೂನ್ 1 ರವರೆಗೆ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಗೆ ತೆರಳಲಿದ್ದಾರೆ.
ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಕೆಲವೇ ದಿನಗಳ ಮೊದಲು ಪ್ರಧಾನಿ ಮೋದಿಯವರ ಆಧ್ಯಾತ್ಮಿಕ ಪ್ರವಾಸ ಬರಲಿದೆ.
2019ರ ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅಂತಿಮ ಹಂತದ ಚುನಾವಣೆಗೂ ಮುನ್ನ ಕೇದಾರನಾಥ ದೇಗುಲಕ್ಕೆ ಇದೇ ರೀತಿಯ ಪ್ರವಾಸ ಕೈಗೊಂಡು ಗುಹೆಯಲ್ಲಿ ಧ್ಯಾನಮಗ್ನರಾಗಿದ್ದರು.
ಕಳೆದ ಲೋಕಸಭಾ ಚುನಾವಣೆಯಿಂದಲೂ, ಪ್ರಧಾನಿ ಮೋದಿ ಚುನಾವಣೆಗೂ ಮುನ್ನ ಈ ರೀತಿ ಧ್ಯಾನ ಮಾಡುತ್ತಿರುವುದು ಕೆಲವರಲ್ಲಿ ಅಚ್ಚರಿ ಉಂಟು ಮಾಡಿದರೆ, ಇನ್ನು ಕೆಲವರಿಲ್ಲಿ ಆತಂಕ ಮನೆ ಮಾಡಿದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


