ಬೆಂಗಳೂರು: ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಅಮಾನವೀಯ ವರ್ತನೆಗೆ 3 ವರ್ಷದ ಬಾಲಕಿ ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ ಮಾಡಿದೆ.
ಡಿಜಿ & ಐಜಿಪಿ ಹೊಸ ರೂಲ್ಸ್ ಆದೇಶದಲ್ಲೇನಿದೆ?
* ಸಕಾರಣವಿಲ್ಲದೆ ವಾಹನಗಳನ್ನ ತಡೆದು ತಪಾಸಣೆಗೆ ಒಳಪಡಿಸಬಾರದು
* ಕಣ್ಣಿಗೆ ಕಾಣುವ (visible Violation) ಕಂಡುಬಂದಲ್ಲಿ ಮಾತ್ರವೇ ವಾಹನಗಳನ್ನ ನಿಲ್ಲಿಸಬೇಕು
* ಹೆದ್ದಾರಿಯಲ್ಲಿ ಜಿಗ್ ಜ್ಯಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು
* ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನಗಳನ್ನ ನಿಲ್ಲಿಸುವಂತೆ ಹೇಳಬಾರದು
* ದ್ವಿಚಕ್ರವಾಹನದ ಹಿಂಬದಿ ಸವಾರನನ್ನ ಹಿಡಿದು ಎಳೆಯುವಂತಿಲ್ಲ
* ವಾಹನಗಳ ಕೀ ಕಸಿಯುವುದನ್ನು ಮಾಡಬಾರದು
* ವೇಗವಾಗಿ ಬರುವ ವಾಹನಗಳ ಬೆನ್ನಟ್ಟದೆ ನೊಂದಣಿ ಸಂಖ್ಯೆ ಗುರುತು ಮಾಡಿ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವುದು
* ವಾಹನಗಳ ತಪಾಸಣೆ ವೇಳೆ ಪೊಲೀಸ್ರು ರಿಫ್ಲೆಕ್ಟೀವ್ ಜಾಕೆಟ್ ಧರಿಸಿರಬೇಕು
* ಸಂಜೆ ಸಮಯದಲ್ಲಿ ಕಡ್ಡಾಯವಾಗಿ ಎಲ್ ಇ ಡಿ ಬಟನ್ ಬಳಸಬೇಕು
* ವಾಹನಗಳ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು
* ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಇತರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಿಸುವ ವಾಹನಗಳನ್ನ ತಡೆಯಬಾರದು
* ತಪಾಸಣೆಯ ಸ್ಥಳದ 100 ರಿಂದ 150 ಮೀಟರ್ ಮೊದಲೇ ರಿಫ್ಲೆಕಟ್ಈವ್ ರಬ್ಬರ್ ಕೋನ್‌ಗಳ ಬಳಸಿ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW