ತುಮಕೂರು: ಬೆಸ್ಕಾಂ ಕ್ಯಾತ್ಸಂದ್ರ ಉಪ ವಿಭಾಗದ ಹೊನ್ನುಡಿಕೆ ಉಪಸ್ಥಾವರದ ಪರಿವರ್ತಕದ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಿಂದ 5ರವರೆಗೆ ತಾವರೇಕೆರೆ, ಮುಳುಕುಂಟೆ, ಹೊನ್ನುಡಿಕೆ, ಸಾಸಲು, ಹೊಳಕಲ್ಲು, ಚೋಳಂಬಳ್ಳಿ, ವಿರೂಪಸಂದ್ರ ಹಾಗೂ ಹಾಲುಗೊಂಡನಹಳ್ಳಿ ಫೀಡರ್ ಗಳಿಗೆ ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುವುದು.
ಈ ಅವಧಿಯಲ್ಲಿ ಗ್ರಾಹಕರು ಸಹಕರಿಸಬೇಕೆಂದು ಕ್ಯಾತ್ಸಂದ್ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q