ತುಮಕೂರು: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿಕರಿಗೆ ಶ್ರೇಷ್ಠ ತೋಟಗಾರಿಕೆ ರೈತ / ರೈತ ಮಹಿಳೆಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಯಸುವವರು ನಿಗಧಿತ ಅರ್ಜಿ ನಮೂನೆಯನ್ನು ತೋ. ವಿ. ವಿ. ಯ ವೆಬ್ ಸೈಟ್ www.uhsbagalkot.karnataka.gov.in ಮೂಲಕ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 5ರೊಳಗಾಗಿ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರ ಕಚೇರಿ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋ.ವಿ.ವಿ. ಆವರಣ ಜಿ.ಕೆ.ವಿ.ಕೆ. ಅಂಚೆ, ಬೆಂಗಳೂರು-560065 ಇವರಿಗೆ ಖುದ್ದಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ. ಇಟಿಗಿ ಪ್ರಭಾಕರ, ವಿಸ್ತರಣಾ ಮುಂದಾಳು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು (9538771475), ಡಾ. ದೊಡ್ಡಬಸಪ್ಪ ಬಿ. ಸಹಾಯಕ ಪ್ರಾಧ್ಯಾಪಕರು, ಕೃಷಿ ಕೀಟಶಾಸ್ತ್ರ, ಪ್ರಾ.ತೋ.ಸಂ.ವಿ.ಕೇಂದ್ರ, ಬೆಂಗಳೂರು (7795072699), ಸೀಮಾ ಎಂ. ಪ್ರಾ.ತೋ.ಸಂ.ವಿ.ಕೇಂದ್ರ, ಬೆಂಗಳೂರು (7411228096) ಅಥವಾ ಸಹಾಯವಾಣಿ 18004257910ಗೆ ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296