ತುಮಕೂರು: ಕರ್ನಾಟಕದ ತುಮಕೂರು ನಗರದ ಪ್ರಮುಖ ಸ್ಥಳದಲ್ಲಿ ಒಂದು ಎಕರೆ ಜಾಗದಲ್ಲಿ ಮಂದಿರವನ್ನು ಕೆಡವಿ, ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಗೆ 30 ವಷಗಳ ಕಾಲಕ್ಕೆ ಭೋಗ್ಯಕ್ಕೆ ನೀಡಿತ್ತು. ಇದರ ವಿರುದ್ದ ಆಂದೋಲನ ರೂಪಿಸಿದ್ದೇವೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ತುಮಕೂರು ಬಿಜೆಪಿ ಶಾಸಕರೊಬ್ಬರು ಇದಕ್ಕೆ ಸಹಕರಿಸಿದ್ದು ಇದರ ವಿರುದ್ದ ಹಿಂದೂ ಪರ ಸಂಘಟನೆಗಳು ಆಂದೋಲನ ಆರಂಭಿಸಿದ್ದೇವೆ. ನ್ಯಾಯಾಲಯದಲ್ಲಿಯೂ ದಾವೆ ಹೂಡಿದ್ದೇವೆ. ರಾಜ್ಯದಲ್ಲಿ ಸರಕಾರಿ ಜಾಗ ವಶಕ್ಕೆ ಪಡೆಯಲು ಯತ್ನಿಸಲಾಗುತ್ತಿದ್ದು ತುಮಕೂರಿನಿಂದ ಆಂದೋಲನ ಆರಂಭಿಸಿದ್ದೇವೆ ಎಂದರು.
ತುಮಕೂರು ನಗರ ಬಿಜೆಪಿ ಶಾಸಕರು 1 ಎಕರೆ ಜಾಗವನ್ನು ಕಮಿಷನ್ ಪಡೆದು ಹಸ್ತಾಂತರಕ್ಕೆ ಸಹಕರಿಸಿರಬಹುದು. ಅದನ್ನು ಅವರು ಸ್ಪಷ್ಟಪಡಿಸಬೇಕು. ಸಮಾಜದ ಮುಂದೆ ಹೇಳಿಕೆ ನೀಡಬೇಕು, ಹಣ್ಣು ವ್ಯಾಪಾರಿಗಳನ್ನು ಇಲ್ಲಿಂದ ಓಡಿಸಿ ಮಂದಿರ ಕೆಡವಿದ್ದಾರೆ. ಒಂದು ಇಂಚು ಜಾಗವನ್ನು ಸಹ ಕೊಡುವುದಿಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4