ವಿಮಾನದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣವು ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. 2024 ರ ಹೊಸ ನಿಯಮದಂತೆ ಇನ್ಮುಂದೆ ದುಬೈಗೆ ಪ್ರಯಾಣಿಸುವವರು ವಿಮಾನದಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ.
ದುಬೈ ವಿಮಾನ ಬ್ಯಾಗೇಜ್ ನಿಯಮಗಳಲ್ಲಿ ಬದಲಾವಣೆಯಾಗಿದ್ದು ಕೆಲವು ವಸ್ತುಗಳನ್ನು ವಿಮಾನದಲ್ಲಿ ಸಾಗಿಸಲು ಕಾನೂನು ಅಪರಾಧವೆಂದು ಪರಿಗಣಿಸಲಾಗಿದೆ. ಯಾವುದೇ ಪ್ರಯಾಣಿಕರು ಈ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಈ ಉತ್ಪನ್ನಗಳ ಸಾಗಾಟ ನಿಷಿದ್ಧ:
* ಕೊಕೇನ್, ಹೆರಾಯಿನ್, ಗಸಗಸೆ ಮತ್ತು ತಲೆತಿರುಗುವಿಕೆಗೆ ಕಾರಣವಾಗುವ ಔಷಧಗಳು.
* ವೀಳ್ಯದೆಲೆ ಮತ್ತು ಕೆಲವು ಗಿಡಮೂಲಿಕೆಗಳು
* ಆನೆ ದಂತ ಮತ್ತು ಘೇಂಡಾಮೃಗಗಳ ಕೊಂಬು, ಜೂಜಾಟದ ಉಪಕರಣಗಳು, ಮೂರು ಪದರಗಳ ಮೀನುಗಾರಿಕೆ ಬಲೆಗಳು ಮತ್ತು ಬಹಿಷ್ಕರಿಸಿದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಸಾಗಣೆಯೂ ಸಹ ಅಪರಾಧವೆಂದು ಪರಿಗಣನೆ.
* ಮುದ್ರಿತ ವಸ್ತುಗಳು, ತೈಲ ವರ್ಣಚಿತ್ರಗಳು, ಛಾಯಾಚಿತ್ರಗಳು, ಪುಸ್ತಕಗಳು ಮತ್ತು ಕಲ್ಲಿನ ಶಿಲ್ಪಗಳು
* ನಕಲಿ ನೋಟು, ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ಮಾಂಸಾಹಾರ
ಈ ವಸ್ತುಗಳನ್ನು ಸಾಗಿಸಲು ಹಣ ಪಾವತಿಸಬೇಕು:
* ಗಿಡಗಳು
* ರಸಗೊಬ್ಬರ
* ಔಷಧಿಗಳು
* ವೈದ್ಯಕೀಯ ಉಪಕರಣಗಳು
* ಪುಸ್ತಕಗಳು
* ಸೌಂದರ್ಯವರ್ಧಕಗಳು
* ಟ್ರಾನ್ಸ್ ಮಿಷನ್ ಮತ್ತು ವೈರ್ ಲೆಸ್ ಸಾಧನಗಳು
* ಆಲ್ಕೊಹಾಲ್ ಯುಕ್ತ ಪಾನೀಯಗಳು
* ವೈಯಕ್ತಿಕ ಆರೈಕೆ ಉತ್ಪನ್ನಗಳು
* ಇ–ಸಿಗರೇಟ್‌ಗಳು
* ಎಲೆಕ್ಟ್ರಾನಿಕ್ ಹುಕ್ಕಾಗಳು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


