ಪಾಕಿಸ್ತಾನ: ಸೆರೆವಾಸ ಅನುಭವಿಸುತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ನಡೆದ ಸಂಘರ್ಷದಲ್ಲಿ ನಾಲ್ವರು ಸೈನಿಕರು ಹಾಗೂ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಾ ಸೋಮವಾರ ಇಸ್ಲಾಮಾಬಾದ್ ಪ್ರವೇಶಿಸಿದ್ದಾರೆ. ಈ ವೇಳೆ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರು , ಸೇನೆಯ ನಡುವೆ ಸಂಘರ್ಷ ನಡೆದಿದೆ. ಈ ವೇಳೆ ನಾಲ್ವರು ಸೈನಿಕರು ಮತ್ತು ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದಾರೆ. 70ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪಾಕಿಸ್ತಾನ್ ತೆಹ್ರೀಕ್—ಎ–ಇನ್ಸಾಫ್ ಪಕ್ಷ ಪಾಕಿಸ್ತಾನ ಹಾಗೂ ಪಂಜಾಬ್ ನಲ್ಲಿ ಪಕ್ಷದ ಮುಖಂಡರು ಸೇರಿ 3,000ಕ್ಕೂಅಧಿಕ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇಮ್ರಾನ್ ಖಾನ್ ವಿರುದ್ದ ಅಧಿಕಾರ ದುರುಪಯೋಗ ಭ್ರಷ್ಟಾಚಾರ ಹಿಂಸಾಚಾರ ಪ್ರಚೋದನೆ ಸೇರಿದಂತೆ ಹಲವು ಪ್ರಕರಣಗಳು ನ್ಯಾಯಲಯದಲ್ಲಿಇವೆ. ಇದರಲ್ಲಿ ಕೆಲವು ಪ್ರಕರಣಗಳಿಗೆ ಜಾಮೀನು ದೊರೆತು ಶಿಕ್ಷೆ ಅಮಾನತುಗೊಳಿಸಿದರೂ ಇವರು ಬಂಧನನದಲ್ಲೇ ಇದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296