ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜಡೆಯ ಗ್ರಾಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಇತ್ತೀಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗ್ರಾಮದ ಮುಂಭಾಗ ಪುನೀತ್ ಅವರ ಬೃಹತ್ ಭಾವಚಿತ್ರವಿರುವ ಫ್ಲೆಕ್ಸ್‌ಗೆ ಹೂವಿನ ಹಾರ, ಬಾಳೆಕಂದು ಕಟ್ಟಿ ಹಣ್ಣು, ಸಿಹಿ ತಿನಿಸುಗಳನ್ನಿಟ್ಟು ಗ್ರಾಮಸ್ಥರು ಪೂಜಿಸಿದರು.
ಅಂಗವಿಕಲ ಮಕ್ಕಳಿಗೆ ಸಹಾಯಧನ ವಿತರಿಸಿ ಮಾತನಾಡಿದ ಮುಖಂಡ ಶಂಕರಲಿಂಗಪ್ಪ, ‘ಚಿಕ್ಕವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟನಾಗಿ ಹೆಸರು ಮಾಡಿದ್ದ ಪುನೀತ್ ಅವರು ಅತ್ಯಂತ ಜನಪ್ರಿಯ ನಟ. ನಮ್ಮೆಲ್ಲರ ಹೆಮ್ಮೆ ಪುತ್ರನಾಗಿದ್ದರು. ಆದರೆ, ಚಿಕ್ಕ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡ ಅಭಿಮಾನಿಗಳು ದುಃಖತಪ್ತರಾಗಿದ್ದಾರೆ’ ಎಂದರು.
ನೂರಾರು ಅಭಿಮಾನಿಗಳಿಗೆ ಅನ್ನ ಅಂತರ್ಪಣೆ ಜರುಗಿತು. ಮುಖಂಡರಾದ ಶಿವರಾಮಯ್ಯ, ರಂಗರಾಜು, ಶಿಕ್ಷಕ ಕೃಷ್ಣಮೂರ್ತಿ, ನಂದೀಶ, ಮಹೇಶ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅಭಿಮಾನಿಗಳು ಪಾಲ್ಗೊಂಡಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700