ಸಿಂಗಾಪೂರ: ಸಿಂಗಾಪೂರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಎರಡನೇ ಸುತ್ತಿನಲ್ಲೇ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಹೊರಬಿದ್ದಿದ್ದಾರೆ. ಸ್ಪೇನ್ ನ ಬದ್ದ ಎದುರಾಳಿ ಕರೋಲಿನಾ ಮರೀನ್ ಎದುರು ಸಿಂಧು ಹೋರಾಡಿ ಸೋಲು ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲೇ ಡೆನ್ಮಾರ್ಕ್‌ನ ಲಿನ್ ಹೊಜ್ಮಾರ್ಕ್ ವಿರುದ್ಧ ಶುಭಾರಂಭ ಮಾಡಿದ್ದ ಸಿಂಧುಗೆ ಎರಡನೇ ಸುತ್ತಿನಲ್ಲೇ ವಿಶ್ವ ನಂ.3 ಶ್ರೇಯಾಂಕಿತೆ ಮರೀನ್ ಎದುರಾದರು. ಸಿಂಧು 21-13, 11-21, 20-22 ಗೇಮ್ ಗಳಲ್ಲಿ ಸಿಂಧು ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿದರು.
ಮೊದಲ ಗೇಮ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಶುಭಾರಂಭ ಮಾಡಿದ ಸಿಂಧು, ಆ ಬಳಿಕ ಅದೇ ಹಿಡಿತ ಸಾಧಿಸಲು ವಿಫಲವಾದರು. ಪುರುಷರ ಸಿಂಗಲ್ಸ್ ನಲ್ಲಿ ಪ್ರಣಯ್ ಬೆಲ್ಜಿಯಂನ ಜೂಲಿಯನ್ ಕರಾಗಿ ವಿರುದ್ಧ 21-09, 18-21, 21-19 ಗೇಮ್‌ಗಳಲ್ಲಿ ಜಯಿಸಿದರು. ಇನ್ನು ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ- ಗಾಯತ್ರಿ ಗೋಪಿಚಂದ್ ಕೂಡಾ 2ನೇ ಸುತ್ತು ಪ್ರವೇಶಿಸಿದರು.
ಆದರೆ ಲಕ್ಷ್ಯ ಸೆನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ 13-21, 21-16, 13-21ರಲ್ಲಿ ಸೋತರೆ, ಮಾಜಿ ವಿಶ್ವ ನಂ.1 ಶ್ರೀಕಾಂತ್ ಅವರು ಜಪಾನ್ ನ ಕೊಡಾಯಿ ನರೋಕಾ ವಿರುದ್ಧ 14-21, 3-11ರಲ್ಲಿ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಹೊರನಡೆದರು. ಇನ್ನು ಮಹಿಳಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ, ಸಿಮ್ರಾನ್-ರಿಶಿಕಾ, ಮಿಶ್ರ ಡಬಲ್ಸ್‌ನಲ್ಲಿ ಸುಮಿತ್ ರೆಡ್ಡಿ-ಸಿಕ್ಕಿ ರೆಡ್ಡಿ ಸೋತು ಹೊರಬಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


