ಮುಂದಿನ ಚುನಾವಣೆಗಾಗಿ ಬೇರೆ ಕ್ಷೇತ್ರ ಹುಡುಕುತ್ತಿದ್ದೇನೆ ಅನ್ನುವುದು ಯಾರ ಕನಸೋ ಗೊತ್ತಿಲ್ಲ. ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯಕ್ಕೋಸ್ಕರ. ರಾಜಕೀಯದಲ್ಲಿ ಏನೇನೋ ಆಗಬೇಕೆಂದು ಮಂಡ್ಯಕ್ಕೆ ಬಂದಿಲ್ಲ. ಇಂದಲ್ಲ ನಾಳೆ ರಾಜಕೀಯ ಬಿಡುತ್ತೇನೆ. ಆದರೆ ಮಂಡ್ಯ ಬಿಡಲ್ಲ. ಮಂಡ್ಯ ಬಿಟ್ಟು ಹೋಗಲ್ಲವೆಂದು ಸಂಸದೆ ಸುಮಲತಾ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಜನರ ಆಸೆಯಂತೆ ನಾನು ಮಂಡಕ್ಕೆ ಬಂದಿದ್ದು. ನಾನ್ಯಾಕೆ ಮಂಡ್ಯ ಜಿಲ್ಲೆ ಬಿಟ್ಟು ಮತ್ತೊಂದು ಕಡೆ ಹೋಗಬೇಕು ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಸುಮಲತಾ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎನ್ನುವ ಚರ್ಚೆಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ಈ ಮೂಲಕ ಎಲ್ಲಾ ಗೊಂದಗಳಿಗೆ ತೆರೆ ಎಳೆದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy