ಪಾವಗಡ: ತಾಲ್ಲೂಕಿನ ಸೇವಾ ಟ್ರಸ್ಟ್ ಮತ್ತು ಹೆಲ್ಪ್ ಸೊಸೈಟಿ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು.
ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪವಿತ್ರ, ಎರಡನೇ ಬಹುಮಾನ, ಭಾರ್ಗವಿ ರಾಮ್, ಮೂರನೇ ಬಹುಮಾನ, ಮೋನಿಕಾ ನಾಲ್ಕನೇ ಬಹುಮಾನ, ಚಾಮುಂಡಿ, ಐದನೇ ಬಹುಮಾನ, ಶ್ರೀದೇವಿ, ಮತ್ತು ಸಮಾಧಾನಕರ ಬಹುಮಾನ, ಗಾಯತ್ರಿ, ಮತ್ತು ವಿಶೇಷವಾಗಿ ಗಂಡು ಮಕ್ಕಳಿಂದ ರಂಗೋಲಿ ಬಿಡಿಸಿದ ಕಾರ್ತಿಕ್ ರವರಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ವಿಜೇತರಿಗೆ ಮಾಜಿ ಪುರಸಭಾ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ ವಿಜೇತರಿಗೆ ಶುಭ ಹಾರೈಸಿ ಬಹುಮಾನ ನೀಡಿದರು.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ರಂಗರಾವ್ ವೈಸ್ ಪ್ರೆಸಿಡೆಂಟ್ ಕಮ್ಮವಾರಿ ಸಂಘ ಹೊಸದುರ್ಗ, ಕಮಲ್ ಬಾಬು ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರು, ರೋಟರಿ ಅಧ್ಯಕ್ಷರಾದ ರಾಮಾಂಜಿ, ಶಶಿಕುಮಾರ್, ಸಂದೀಪ್, ವೆಂಕಟೇಶ್, ಪಾಂಡು, ಚಂದ್ರ ಮೌಳಿ, ರಾಮಚಂದ್ರ ದಾನ ಫೌಂಡೇಶನ್, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕಾಣಿಕೆ ನೀಡಲಾಯಿತು, ಈ ಸ್ಪರ್ಧೆಯಲ್ಲಿ 37 ಮಹಿಳೆಯರು ಪಾಲ್ಗೊಂಡಿದ್ದರು, ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಾಗರಾಜ್, ಶಮೀ ವೃಕ್ಷ ಸತ್ಯ ಲೋಕೇಶ್, ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಸೇವಾ ಟ್ರಸ್ಟ್ ಸಂಧ್ಯಾ ಮಾನಂ ಶಶಿಕಿರಣ್, ಹಿಂದೊಳ, ಬೇಕರಿ ನಾಗರಾಜ್, ಶಶಿಕಲಾ, ರಾಕೇಶ್, ಸಾಯಿ ಕುಮಾರ್, ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx