ತುಮಕೂರು: ತಾಲ್ಲೂಕು ವ್ಯಾಪ್ತಿಯ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಮಂಜೂರಾಗಿ ವಿವಿಧ ಕಾರಣಗಳಿಂದ ರದ್ದಾಗಿರುವ ಮಾಸಾಶನವನ್ನು ಮರು ಚಾಲನೆಗೊಳಿಸಲಾಗುವುದು ಎಂದು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿ 3,900 ಹಾಗೂ ಗ್ರಾಮಾಂತರದಲ್ಲಿ 1,748 ಫಲಾನುಭವಿಗಳ ಮಾಸಾಶನವು ವಿವಿಧ ಕಾರಣಗಳಿಂದ ರದ್ದಾಗಿದ್ದು, ರದ್ದಾಗಿರುವ ಫಲಾನುಭವಿಗಳ ಮಾಸಾಶನವನ್ನು ಕೂಡಲೇ ಮರು ಚಾಲನೆಗೊಳಿಸಲಾಗುವುದು. ಮರು ಚಾಲನೆಗಾಗಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮಾಸಾಶನ ಆದೇಶದ ಪ್ರತಿ ಹಾಗೂ ಎನ್.ಪಿ.ಸಿ.ಐ. ಲಿಂಕ್ ಪ್ರತಿಯನ್ನು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ತಾಲ್ಲೂಕು ಕಚೇರಿಯ ಸಾಮಾಜಿಕ ಭದ್ರತಾ ಯೋಜನಾ ಶಾಖೆಗೆ ನೀಡಿ ರದ್ದಾಗಿರುವ ಮಾಸಾಶನವನ್ನು ಮರು ಚಾಲನೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q