ಕೊಪ್ಪಳ: ಮುಸ್ಲಿಮ್ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವ ಅಭಿಯಾನ ಆರಂಭ ಮಾಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕೊಪ್ಪಳ ನಗರದ ಕುರುಬರ ಓಣಿಯಲ್ಲಿನ ಕೊಲೆಯಾದ ಗವಿಸಿದ್ದಪ್ಪ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಮಸೀದಿ ಮುಂದೆಯೇ ಗವಿಸಿದ್ದಪ್ಪ ನಾಯಕ ಕೊಲೆಯಾಗಿದೆ. ಕೊಲೆ ಮಾಡುವಾಗ ತಡೆಯುವ ಕೆಲಸ ಅಲ್ಲಿದ್ದವರು ಮಾಡಿಲ್ಲ. ಕೊಲೆ ಮಾಡಿದ ಆರೋಪಿ ರೀಲ್ಸ್ ನಲ್ಲಿ ಮಚ್ಚು ತೋರಿಸಿದ್ದಾನೆ. ಈಗ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆ ಹುಡುಗಿಯನ್ನೂ ಅರೆಸ್ಟ್ ಮಾಡಬೇಕು. ಮಚ್ಚು ಹಿಡಿದು ಓಡಾಡುವವರಿಗೆ ಸರ್ಕಾರ ಬೆಂಬಲ ನೀಡುತ್ತದೆ ಅಂತ ಆರೋಪಿಸಿದರು.
ಲವ್ ಜಿಹಾದ್ ಮಾಡಿದಾಗ ಸರ್ಕಾರ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತದೆ. ಸರ್ಕಾರ ಮುಸ್ಲಿಂರಿಗೆ ಮಾತ್ರ ರಕ್ಷಣೆ ನೀಡುತ್ತದೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC