ಬೀದರ್: ಜಿಲ್ಲೆಯಲ್ಲಿ 42 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನ ದಾಖಲಾಗಿದ್ದು, ಹೀಗಾಗಿ ನಾಗರಿಕರ ಆರೋಗ್ಯ ದೃಷ್ಟಿಯಿಂದ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹಾಗೂ ಪೊಲೀಸ್ ಅಧೀಕ್ಷಕರಾದ ಚನ್ನಬಸವಣ್ಣ ಅವರು ಹಲವು ನಿಯಮಗಳನ್ನು ಸಾರ್ವಜನಿಕರು ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
* ಮಧ್ಯಾಹ್ನ 12 ರಿಂದ 3 ರವರೆಗೆ ಮನೆಯಿಂದ ಹೊರಗೆ ಹೋಗುವುದನ್ನು ಆದಷ್ಟು ಮುಂದೂಡುವುದು.
* ದೇಹದಲ್ಲಿ ನಿರ್ಜಲಿಕರಣ(Dehydration) ಆಗದಂತೆ ಸಾಕಷ್ಟು ನೀರು ಕುಡಿಯುವುದು, ಸಾಧ್ಯವಾದಲ್ಲಿ ಓ.ಆರ್.ಎಸ್. ಬೆರೆಸಿ ಕುಡಿಯಿರಿ.
* ಮಕ್ಕಳನ್ನು, ಸಾಕು ಪ್ರಾಣಿಗಳನ್ನು ನಿಲ್ಲಿಸಿದ ವಾಹನಗಳಲ್ಲಿ ಬಿಟ್ಟು ಹೋಗಬೇಡಿ.
* ಪ್ರಾಣಿಗಳನ್ನು ಗುಡಿಸಲು/ನೆರಳಿನಲ್ಲಿ ಇರಿಸಿ ಮತ್ತು ಸಾಕಷ್ಟು ಕುಡಿಯಲು ನೀರು ಕೊಡಿ.
* ನಿಮ್ಮ ಮನೆಯ ಕಿಟಕಿಗಳಿಗೆ ಪರದೆಗಳನ್ನು ಬಳಸಿ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಿ, ರಾತ್ರಿ ಸಮಯದಲ್ಲಿ ಕಿಟಕಿಗಳನ್ನು ತೆರೆದಿಟ್ಟು ಮನೆಯನ್ನು ತಂಪಾಗಿರಿಸಿ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296