ತುಮಕೂರು: ಸುರೇಶ್ ಗೌಡ ಪಾರ್ಟಿಯಲ್ಲೇ ಯಗ್ಗಣ ಸತ್ತು ಬಿದ್ದಿದೆ, ನಾನು ವಿಜಯೇಂದ್ರ ಜಾಗದಲ್ಲಿ ಇದ್ದಿದ್ರೆ ಯತ್ನಾಳ್ ಕಿತ್ತು ಬಿಸಾಕ್ ತಾ ಇದ್ದೆ. ಯತ್ನಾಳ್ ಸೀನಿಯರ್ ಲೀಡರ್ ಇದ್ರು ಅಂತಹವರ ಬಾಯಲ್ಲಿ ಇಂತಹ ಆರೋಪ ಬಂದ್ರು ಕೇಳೋರಿಲ್ಲ. ಅವರು ಪಕ್ಷದಲ್ಲಿ ಶಿಸ್ತು ಇದ್ಯಾ, ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು ಆದ್ರೆ ಗುಂಪುಗಾರಿಕೆ ಇಲ್ಲ ಎಂದು ಶಾಸಕ ಸುರೇಶ್ ಗೌಡಗೆ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು.
ಲಿಂಕ್ ಕೇನಾಲ್ ಸಂಪೂರ್ಣವಾಗಿ ಬೇಡ ಅಂತಾ ಇದ್ದೇವೆ. ಬೇರೆ ಭೂಮಿಯಲ್ಲಿ ಮಾಡಬೇಕಾದ್ರೆ ಅಕ್ವೇಷನ್ ಮಾಡಬೇಕು. ರೈತ ಒಪ್ಪದೇ ಯಾವುದೇ ಕಾಮಗಾರಿ ಮಾಡಬಾರದು. ನೀರು ಅಲ್ಲಿಗೆ ಹೋಗದ ರೀತಿಯಲ್ಲಿ ನೋಡಿ ಕೊಳ್ತೀವಿ ಎಂದರು.
ನಾನು ಅಧಿಕಾರದಲ್ಲಿದ್ದಾಗ ನನ್ನ ಜಾತಿಯವರು ಅಧಿಕಾರಕ್ಕೆ ಬರಬಾರದು, ಮತ್ತೆ ಬೇರೆ ಜಾತಿಯವರನ್ನ ಆ ಭಾಗದಲ್ಲಿ ಅಧಿಕಾರ ನೀಡಬೇಕು. ಇದನ್ನ ಕೆ.ಸಿ.ವೇಣುಗೋಪಾಲ್ ಅವರಿಗೆ ಮನವರಿಕೆ ಮಾಡಿದ್ದೇನೆ ಒಪ್ಪಿದ್ದಾರೆ. ಕೆಲಸ ವಿಧಾನ ಪರಿಷತ್ ಸದಸ್ಯರ ನಾಮಿನೇಷನ್ ಮಾಡುತ್ತಿದ್ದಾರೆ. ಯಾವ ಜಾತಿಯವರು ಪರಿಷತ್ ನಲ್ಲಿ ಇಲ್ಲ ಅವರಿಗೆ ಮಾಡಬೇಕು. ದೇವರಾಜು ಅರಸು ಕಾಲದಲ್ಲಿ ಹುಡುಕಿ ಮಾಡ್ತಾ ಇದ್ರು. ಯಾರು ಇಲ್ಲ ಅವರಿಗೆ ಮಾಡಬೇಕು. ಬ್ರಾಹ್ಮಣರಿಗೆ ನಾವು ವಿರೋಧಿಗಳಲ್ಲ ಅವರಿಗೂ ಮಾಡಲಿ. ಒಂದು ಒತ್ತು ಊಟ ಮಾಡೋ ಬ್ರಾಹ್ಮಣರನ್ನ ನಾನು ತೋರಿಸುತ್ತೇನೆ, ಬ್ರಾಹ್ಮಣರು ಅಂದ್ರೆ ಗೋಪುರ ಕಟ್ಟಿಕೊಂಡು ಇರ್ತಾರ. ಎಲ್ಲಾ ಜಾತಿಯಲ್ಲಿನ ಬಡವರು ಶೋಶಿತರೇ. ನಾನು ಶೋಷಿತರು ಅಂದ್ರೆ ಎಸ್ಸಿ ಎಸ್ಟಿ ಅಂದು ಬಿಡ್ತೀರಾ. ಕೆಲವರು ಮೇಲ್ವಾರ್ಗ ಕೆಳವರ್ಗ ಅಂತಾರೆ ಅದನ್ನ ಖಂಡನೆ ಮಾಡ್ತೀನಿ, ಮುಂದುವರೆದವರು ಹಿಂದುಳಿದವರು ಅನ್ನಲಿ ಎಂದರು.
ಕೆ.ಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಮೆ.18 ರಂದು 2023 ರಲ್ಲಿ ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ. ರೀಲೀಸ್ ಮಾಡಿರೋದ್ರಲ್ಲಿ ಏನಿದೆ ಅವರ ಗಮನಕ್ಕೆ ತಂದಿದ್ದೇನೆ. ಈ ಲೋಕಸಭೆನಾ ಅಥವಾ ಇನ್ನೊಂದ ಅಂತಾ ಕೇಳಿ ಬಂದಿದ್ದೇನೆ. ಲೋಕಸಭೆ ಮುಗಿದು ಒಂದು ವರ್ಷ ಆಯ್ತು ಕೇಳಿದ್ದೀನಿ. ನಾನು ಒನ್ ಮ್ಯಾನ್ ಒನ್ ಪೋಸ್ಟ್ ಅಂತಿನೀ. ನನ್ನ ಅಧ್ಯಕ್ಷ ಮಾಡಿದ್ರೆ ಮಿಸಿಸ್ಟರ್ ಗಿರಿ ಬಿಡ್ತೀನಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4