nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026
    Facebook Twitter Instagram
    ಟ್ರೆಂಡಿಂಗ್
    • ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    • ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
    • ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
    • ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
    • ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
    • ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ
    • ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ
    • ಮಧುಗಿರಿ: ರಾಜಣ್ಣ, ಜಮೀರ್ ಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ ಭಾರತೀಯ ಮೌಲ್ಯಗಳನ್ನು ಅಳವಡಿಸಿ: ಶಾಸಕ ಬಿ.ಸುರೇಶ್‌ ಗೌಡ
    ತುಮಕೂರು September 25, 2024

    ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ ಭಾರತೀಯ ಮೌಲ್ಯಗಳನ್ನು ಅಳವಡಿಸಿ: ಶಾಸಕ ಬಿ.ಸುರೇಶ್‌ ಗೌಡ

    By adminSeptember 25, 2024No Comments2 Mins Read
    mla suresh gowda

    Provided by
    Provided by

    ತುಮಕೂರು:  ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳೂ ಇದ್ದು, ಅಲ್ಲಿಗೇ ಮಕ್ಕಳನ್ನು ಕಳಿಸುವ ಮೂಲಕ ಅವರಲ್ಲಿ ಭಾರತೀಯ ಮೌಲ್ಯಗಳನ್ನು ಅಳವಡಿಸುವಂತೆ ಮಾಡಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ ಗೌಡರು ಬುಧವಾರ ಕರೆ ನೀಡಿದರು.

    ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಗವಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊಟ್ಟೆ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಸುರೇಶಗೌಡರು ಭಾಗವಹಿಸಿ ಮಾತನಾಡಿದರು .

    ಸರ್ಕಾರಿ ಶಾಲೆಯ ಮಕ್ಕಳಿಗೆ ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನದ ವತಿಯಿಂದ ವಾರದಲ್ಲಿ ಆರು ದಿನ ಮೊಟ್ಟೆ, ಚಿಕ್ಕಿ ಮತ್ತು ಬಾಳೆ ಹಣ್ಣು ನೀಡುವ ಕಾರ್ಯಕ್ರಮವನ್ನು ನಾಗವಲ್ಲಿ ಮತ್ತು ಬೆಳ್ಳಾವೆ ಸರ್ಕಾರಿ ಶಾಲೆಗಳಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

    ಶಾಲೆಯ ಮಕ್ಕಳಿಗೆ ಅವರೇ ಆಹಾರ ಬಡಿಸಿ ಮಕ್ಕಳು ಮತ್ತು ಶಿಕ್ಷಕರ ಜತೆಗೆ ಸಂವಾದ ನಡೆಸಿದರು.

    ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದ ವತಿಯಿಂದ ಸಮವಸ್ತ್ರ, ಶೂ, ಮಧ್ಯಾಹ್ನದ ಊಟ ಮಾತ್ರವಲ್ಲದೇ ಇದೀಗ ಮೊಟ್ಟೆಯಂಥ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ಆರಂಭವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರು ಇರುತ್ತಾರೆ. ಈ ಶಾಲೆಗಳಲ್ಲಿ ಓದಿದವರೇ ಜೀವನದಲ್ಲಿ ದೊಡ್ಡ ಹುದ್ದೆಗಳಿಗೆ ಹೋಗಿ ತಲುಪಿದ್ದಾರೆ. ನಾನು ಕೂಡ ಇಂಥ ಸರ್ಕಾರಿ ಶಾಲೆಯಲ್ಲಿಯೇ ಓದಿ, ಸಾರ್ವಜನಿಕ ಜೀವನಕ್ಕೆ ಬಂದೆʼ ಎಂದು ಅವರು ಹೇಳಿದರು.

    ʻಕಾನ್ವೆಂಟ್‌ ಗಳಿಗೆ ಮಕ್ಕಳನ್ನು ಕಳಿಸಿದರೆ, ಅವರು ಬುದ್ಧಿವಂತರಾಗುತ್ತಾರೆ ಎಂಬ ಅಭಿಪ್ರಾಯವೂ ಇದೆ. ಆದರೆ, ಅನೇಕ ಕಾನ್ವೆಂಟ್‌ ಗಳಲ್ಲಿ ಸೂಕ್ತ ಸೌಲಭ್ಯಗಳು ಇರುವುದಿಲ್ಲ. ಅಲ್ಲಿ ಸರ್ಕಾರಿ ಶಾಲೆಗಳಲ್ಲಿ ಇರುವ ಇಂಥ ಯಾವ ಸೌಕರ್ಯಗಳೂ ಇರುವುದಿಲ್ಲʼ ಎಂದು ಅವರು ತಿಳಿಸಿದರು.

    ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲು ದಾನ ಮಾಡಿದ ಅಜೀಂ ಪ್ರೇಮ್‌ ಜಿ ಅವರ ಕೊಡುಗೈ ಗುಣವನ್ನು ಅವರು ಶ್ಲಾಘಿಸಿದರು. ಎಲ್ಲ ಶ್ರೀಮಂತರು, ಉದ್ಯಮಿಗಳು ಹೀಗೆ ಸರ್ಕಾರಿ ಶಾಲೆಗಳ ಬೆಂಬಲಕ್ಕೆ ಬಂದು ನಿಲ್ಲಬೇಕು. ತಮ್ಮ ಸಿಎಸ್‌ ಆರ್‌ ನಿಧಿಯನ್ನು ಇದಕ್ಕೆ ಬಳಸಬೇಕು ಎಂದು ಅವರು ಕರೆ ಕೊಟ್ಟರು.

    ತಾವು ಕೂಡ ತಮ್ಮ ಹಿಂದಿನ ಅವಧಿಯಲ್ಲಿ ತಮ್ಮ ಕ್ಷೇತ್ರದಾದ್ಯಂತ ಹತ್ತಾರು ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದುದನ್ನು ಅವರು ನೆನಪಿಸಿಕೊಂಡು ಸರ್ಕಾರಿ ಶಾಲೆಗಳ ರಕ್ಷಣೆಗೆ ಮತ್ತು ಅಭಿವೃದ್ಧಿಗೆ ತಾವು ನಿರಂತರವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು.

    ಕಾರ್ಯಕ್ರಮದಲ್ಲಿ ಬಿಇಒ ಹನುಮಂತಪ್ಪ, ಎಸ್ ಡಿ ಎಂ ಸಿ ಸದಸ್ಯರಾದ ನಾಗಣ್ಣ, ಮಂಗಳಮ್ಮ, ಮೂಡಲಗಿರಿಯಪ್ಪ ನಾಗರತ್ನಮ್ಮ, ಪಾಪಣ್ಣ, ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ತುಮಕೂರು : 2026–2027 ಸಾಲಿನ ಎಸ್ ಎಫ್ ಸಿ ಮುಕ್ತನಿಧಿ ಅನುದಾನದಲ್ಲಿ ಹಾಗೂ ನಗರಸಭಾ ನಿಧಿಯಲ್ಲಿ ಶೇ24.1, 7.25 ಹಾಗೂ…

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026

    ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ

    June 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.