ಹಾಸನ: ಮಹಾಶಿವರಾತ್ರಿ ಪ್ರಯುಕ್ತ ಹಾಸನ ಜಿಲ್ಲೆಯ ರಾಮನಾಥಪುರ ಹೋಬಳಿಯ ಶಿರಧನಹಳ್ಳಿ ಗ್ರಾಮದ ಶ್ರೀ ಭೂಮಂಡಲ ಶ್ರೀ ಶನೈಶ್ಚರಸ್ವಾಮಿ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶನಿದೇವರು ಮತ್ತು ಮಸಣಿಕಮ್ಮ ವಿಗ್ರಹಗಳನ್ನು ಬೆಳ್ಳಿ ರಥದಲ್ಲಿ ಕುರಿಸಿ ರಾಮನಾಥಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಗಾಸೆ ನೃತ್ಯ ಜೊತೆ ಸಾವಿರಾರು ಭಕ್ತರು ಸೇರಿದ್ದರು. ಹಾಗೂ ಸಾವಿರಾರು ಸೇರಿದ ಭಕ್ತರಿಗೆ ಸನ್ನಿದಾನದಲ್ಲಿ ಅನ್ನಸಂತಪರ್ಣೆ ಏರ್ಪಡಿಸಲಾಗಿತ್ತು.
ಸೇರಿದ ಭಕ್ತರಿಗೆ ಸನ್ನಿದಿಯ ಆವರಣದಲ್ಲಿ ಶಿವರಾತ್ರಿ ಜಾಗರಣೆಂದೆ ಸನ್ನಿದಾನದಲ್ಲಿ ಶನಿಪ್ರಭಾವ ಅಥವಾ ರಾಜ್ ವಿಕ್ರಂ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4