ತುಮಕೂರು: ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಯು ಅಕ್ಟೋಬರ್ 11ರ ಶುಕ್ರವಾರ ಆಯುಧ ಪೂಜೆ ದಿನದಂದು ಸಿದ್ಧಿದಾತ್ರಿ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸಲಿದ್ದಾಳೆ ಎಂದು ದಸರಾ ಉತ್ಸವದ ಧಾರ್ಮಿಕ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಶರದ್ ಋತು ಅಶ್ವಿಜ ಮಾಸ ಶುಕ್ಲ ಪಕ್ಷದ ಶುಕ್ರವಾರ ಬೆಳಿಗ್ಗೆ 5:30 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಸಿದ್ಧಿದಾತ್ರಿ ದೇವಿಗೆ ಪುಣ್ಯಾಹ, ಗಣಪತಿ ಪೂಜೆ, ಪ್ರಧಾನ ಕಳಶರಾಧನೆ, ಪಂಚಾಮೃತ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆ, “ಶ್ರೀ ಗಾಯಿತ್ರಿ ಹೋಮ”, ಲಘು ಪೂರ್ಣಾಹುತಿ, ಅಷ್ಟಾವದಾನ ಸೇವೆ, ಮಂತ್ರಪುಷ್ಪ ರಾಷ್ಟ್ರಾಶಿರ್ವಾದ, ಬೆಳಿಗ್ಗೆ 9:30 ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 4:30 ಗಂಟೆಗೆ ವೇದಪಾರಾಯಣ, ದುರ್ಗಾಸಪ್ತಶಶಿ ಪಾರಾಯಣ, ಅಷ್ಟಾವದಾನ, ಕುಂಕುಮಾರ್ಚನೆ, ರಾ.7:30 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು :
ದಸರಾ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 11ರಂದು ಸಂಜೆ 5 ಗಂಟೆಯಿಂದ ತುಮಕೂರಿನ ನೀಲಾಲಯ ನೃತ್ಯ ಕೇಂದ್ರದಿಂದ ಜಾನಪದ ನೃತ್ಯರೂಪಕ; 5:45 ಗಂಟೆಯಿಂದ ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q