ಬೆಂಗಳೂರು: ಎಸ್ಐಟಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರವಾಗಿ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಐಟಿ ನಡೆಸುವ ಪಿನ್ ಟು ಪಿನ್ ತನಿಖೆಯ ಮಾಹಿತಿ ಕಾಂಗ್ರೆಸ್ ಗೆ ಹೋಗ್ತಿದೆ. ಅದಕ್ಕಾಗಿಯೇ ಬಿಜೆಪಿ ಕಡೆ ತಿರುಗಿಸ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಾದರೆ ಸಿಬಿಐಗೆ ತನಿಖೆ ವಹಿಸಲಿ ಎಂದು ಆಗ್ರಹಿಸಿದರು.
ಹಾಸನದಲ್ಲಿ ಹಲವು ಕಡೆ ಎಸ್ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ನವ್ರಿಗೆ ತಮ್ಮ ಮೇಲೆ ಬಂದ ಆಪಾದನೆಯಿಂದ ಇರಿಸುಮುರಿಸು ಆಗಿದೆ. ಎಸ್ಐಟಿ ಅಧಿಕಾರಿಗಳು ಪಕ್ಷಪಾತಿ ಧೋರಣೆ ತೋರಿಸ್ತಿದ್ದಾರೆ. ಇದರ ಹಿಂದೆ ದೊಡ್ಡ ತಿಮಿಂಗಿಲ ಇದೆ ಅಂತ ಹೆಚ್ಡಿಕೆ ಆರೋಪ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಇದನ್ನು ಬಿಜೆಪಿ ಕಡೆ ತಿರುಗಿಸಲು ಸಂಚು ನಡೆದಿದೆ ಎಂದರು.
ಒಕ್ಕಲಿಗ ಸಮುದಾಯ ತಮ್ಮ ವಿರುದ್ಧ ತಿರುಗಿ ಬೀಳುವ ಭೀತಿಯಿಂದ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆರೋಪ ಮಾಡ್ತಿದೆ. ಪೆನ್ಡ್ರೈವ್ ಹಂಚಿದವರೇ ಕಾಂಗ್ರೆಸ್ ನವ್ರು, ಇದರಲ್ಲಿ ಎರಡು ಮಾತಿಲ್ಲ. ಈಗ ತಮ್ಮ ಮೇಲಿನ ಆಪಾದನೆಯನ್ನು ಬಿಜೆಪಿ ಕಡೆ ತಿರುಗಿಸ್ತಿದ್ದಾರೆಂದು ಆರೋಪಿಸಿದರು.
ಪ್ರಜ್ವಲ್ ವಾಪಸ್ ಬಂದಿಲ್ಲ, ಎಸ್ಐಟಿ ನವ್ರು ಬಂಧಿಸಿ ಕರೆತಂದಿಲ್ಲ. ಸಿಬಿಐನವ್ರು ತನಿಖೆ ನಡೆಸಿದರೆ ಪ್ರಜ್ವಲ್ ನ ಕರೆತರಬಹುದು ಎಂದ ಅವರು, ಹಾಸನ ಕಾಂಗ್ರೆಸ್ ಕಾರ್ಯಕರ್ತರ ಬಳಿಯೂ ವಿಡಿಯೋ ಮತ್ತು ಪೆನ್ಡ್ರೈವ್ ಇದೆ. ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ಗಳನ್ನೂ ಚೆಕ್ ಮಾಡಲಿ, ಯಾಕೆ ಕಾಂಗ್ರೆಸ್ ಕಾರ್ಯಕರ್ತರ ವಿಚಾರಣೆ ಮಾಡಿಲ್ಲ, ಇದೆಲ್ಲ ದೊಡ್ಡ ಪ್ರೀಪ್ಲಾನ್ ಮಾಡಿಯೇ ಮಾಡ್ತಿದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296