ಬೆಳಗಾವಿ: ಜಿನ ಭಜನೆಯಲ್ಲಿ ಮಾಡುವ ಸಂಗೀತಕ್ಕೆ ಅದರಿಂದ ಮೂಡಿಬರುವ ಶಬ್ದಗಳು ಸಹಕಾರಿಯಾಗಲಿವೆ, ನಿಶ್ಚಲತೆಯಿಂದ ಶಕ್ತಿ ಬರುತ್ತದೆ, ಮನಸ್ಸು ಮೌನವಾದಾಗ ಧ್ಯಾನವಾಗುತ್ತದೆ. ಇದು ಶಕ್ತಿಯಾಗಿ ನಂತರ ಸರಳವಾಗಿ ಭಜನೆ ಆಗುತ್ತದೆ ಎಂದು ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿ ನಿರಂಜನ್ ಹೆಗಡೆ ತಿಳಿಸಿದರು.
ಅವರಿಂದು ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿ ಭಾರತೀಯ ಜೈನ್ ಮಿಲನ್ ವಲಯ –8. ಜಿನ ಭಜನಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿನ ಭಜನ ಸಂಘಟನೆ ಕಷ್ಟದ ಕೆಲಸ, ಈ ಜಿನ ಭಜನೆ ಈ ಹಿಂದೆ ನಿತ್ಯದ ಭಜನೆಯಾಗಿತ್ತು, ಟಿ.ವಿ. ಬಂದ ನಂತರ ಭಜನೆ ತಿರುಸ್ಕೃತವಾಯಿತು ,ಇಂಟರ್ನೆಟ್ ಬಂದ ನಂತರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಇಂತಹ ಜಿನ ಭಜನೆಗೆ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ , ಡಾ. ಹೇಮಾವತಿ ಹೆಗಡೆ, ಅನಿತಾ ಸುರೇಂದ್ರ ಕುಮಾರ್ ಹಾಗೂ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಹೊಸ ರೂಪ ನೀಡಿ ಜೀವ ತುಂಬಿದರು. ಹಳ್ಳಿ ಹಳ್ಳಿಗಳಲ್ಲಿ ಭಜನಾ ಕಮಟಗಳನ್ನು ನಡೆಸಿ ಹೊಸ ರೂಪ ನೀಡಿದರು .ಇದು ಇಂದು ಗ್ರಾಮೀಣ ಪ್ರದೇಶದಲ್ಲಿ ಉಜ್ವಲವಾಗಿದ್ದು ಇದನ್ನು ಯುವ ಪೀಳಿಗೆ ಮುಂದಿನ ಜನಾಂಗಕ್ಕೆ ಉಳಿಸಿ ಬೆಳೆಸಬೇಕೆಂದು ಅವರು ,ಯುವ ಪೀಳಿಗೆ ಮೊಬೈಲ್ ಸಂಸ್ಕೃತಿಯಿಂದ ದೂರ ಸರಿದು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
” ಬಸದಿಗೆ ಬನ್ನಿ ” ಎಂಬ ವಿನೂತನ ಕಾರ್ಯಕ್ರಮ ನಡೆಸಲಾಗುತ್ತಿದೆ .ಸಂಗೀತ ,ಮನಸ್ಸು , ಮೌನ , ಧ್ಯಾನ ಒಟ್ಟು ಮಾಡುತ್ತದೆ ,ಋಷಿಗಳು ಸಂಗೀತ ವನ್ನು ಧ್ಯಾನದ ಮೂಲಕ ನೀಡಲು ಸಹಕಾರಿಯದರು. ಸಂಗೀತ ಧ್ಯಾನವಾಗಿ ರೂಪುಗೊಳ್ಳುತ್ತದೆ ಅದು ಮುನ್ನಡೆದಾಗ “ಸಂಗೀತ ಧ್ಯಾನ “. ನೀಡುತ್ತದೆ .ಶಬ್ದ ಕೆಳಗೆ ಬಿದ್ದಾಗ ಸಂಗೀತ ಸಹಕಾರಿ ಯಾಗುತ್ತದೆ ಎಂದರು.
ಭಜನೆಗಳ ಬಗ್ಗೆ ಮಕ್ಕಳಿಗೆ ಪರಿಚಯಿಸಿ ಪ್ರಚಾರ ಮಾಡಬೇಕೆಂದು ಅವರು ,ಮನಸ್ಸಿನಲ್ಲಿ ಭಜನೆ ಮಾಡಿ ಸತ್ಯ, ಧರ್ಮ, ಸಂಸ್ಕೃತಿ ಯನ್ನು ಉಳಿಸಿ ಬೆಳೆಸಬೇಕೆಂದರು.
ಜೈನ್ ಮಿಲನ್ ಬೆಳಗಾವಿ ಸೆಂಟ್ರಲ್ ನ ಅಧ್ಯಕ್ಷ ಗುಣಪಾಲ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಧಾರವಾಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕಿ ಡಾ. ಪದ್ಮಲತಾ ನಿರಂಜನ್ ,ಜಿನ ಭಜನ ಸಂಯೋಜಕರಾದ ಶ್ರೀಮತಿ ಉದಯ ಪಾಟೀಲ್, ದಕ್ಷಿಣ ಭಾರತ ಜೈನ್ ಟ್ರಸ್ಟ್ ನ ಅಶೋಕ್ ಜೈನ್, ಬೆಳಗಾವಿ ಮಾಣಿಕ್ ಬಾಗ್ ಜೈನ್ ಬೋರ್ಡಿನ ಪುಷ್ಪಕ್ ಹನುಮಣ್ಣನವರ್, ಉಪಾಧ್ಯಕ್ಷ ಸಂಜಯ ಕುಶನೂರು ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಸಹಕಾರದ ಯಲ್ಲಪ್ಪ ಮೇಘಿನ ಮನೆ, ಧಾರವಾಡ ವಿಭಾಗದ ಉಪಾಧ್ಯಕ್ಷರಾದ ಜೀವನ ದರ್ ಕುಮಾರ್, ದಕ್ಷಿಣ ಭಾರತ ಜೈನ್ ಟ್ರಸ್ಟ್ ನ ಸಿದ್ದಣ್ಣ ನಾಗನೂರು ,ಹುಬ್ಬಳ್ಳಿ ದಿಗಂಬರ್ ಜೈನ್ ಮಹಿಳಾ ಸಮಾಜದ ತ್ರಿಶಾಲ ಮಾಲಗುತ್ತಿ, ಸುಜಾತ ಹಡಗಲಿ, ಸೇರಿದಂತೆ ಧಾರವಾಡ ವಿಭಾಗದ ಜಿನ ಭಜನಾ ತಂಡಗಳು, ಶ್ರಾವಕ ಶ್ರಾವ ಕಿ, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಪ್ರೇಮ ಉಪಧ್ಯ ಪ್ರಾರ್ಥಿಸಿದರು. ಗುಣ ಪಾಲ ಹೆಗಡೆ ವಂದಿಸಿದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx