nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವರಾತ್ರಿಯಲ್ಲಿ ಗರ್ಬಾ ನೃತ್ಯವನ್ನೇಕೆ ಮಾಡುತ್ತಾರೆ? ಇದರ ವಿಶೇಷ ಅರ್ಥ ಇಲ್ಲಿದೆ!

    October 15, 2026

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?

    October 15, 2026
    Facebook Twitter Instagram
    ಟ್ರೆಂಡಿಂಗ್
    • ನವರಾತ್ರಿಯಲ್ಲಿ ಗರ್ಬಾ ನೃತ್ಯವನ್ನೇಕೆ ಮಾಡುತ್ತಾರೆ? ಇದರ ವಿಶೇಷ ಅರ್ಥ ಇಲ್ಲಿದೆ!
    • ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ
    • ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?
    • ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್
    • ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!
    • ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
    • ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ
    • ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪುಣ್ಯ ಸಂಪಾದನೆಯಿಂದ ಸರ್ವ ಕಾರ್ಯಗಳ ಯಶಸ್ಸು ಸಾಧ್ಯ:  ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟರಕ ಶ್ರೀಗಳು
    ಜಿಲ್ಲಾ ಸುದ್ದಿ December 16, 2024

    ಪುಣ್ಯ ಸಂಪಾದನೆಯಿಂದ ಸರ್ವ ಕಾರ್ಯಗಳ ಯಶಸ್ಸು ಸಾಧ್ಯ:  ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟರಕ ಶ್ರೀಗಳು

    By adminDecember 16, 2024No Comments3 Mins Read
    lakshmi sena

    ಗೌರಿಬಿದನೂರು:   ಜೈನ ಧರ್ಮದ ಯಾವುದೇ ಧರ್ಮ ಕಾರ್ಯದ ಯಶಸ್ವಿಗೆ  “ಪುಣ್ಯ ಸಂಪಾದನೆ”  ಅಗತ್ಯವಾಗಿದ್ದು ಇದರಿಂದ ಎಲ್ಲಾ ಕಾರ್ಯಗಳ ಯಶಸ್ಸು ಸಾಧ್ಯವಾಗಲಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

    ಅವರಿಂದ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲೂಕಿನ, ಶ್ರೀ ಕ್ಷೇತ್ರ ಗುಂಡ್ಲಹಳ್ಳಿಯಲ್ಲಿ ಶ್ರೀ ಶೀತಲನಾಥ ತೀರ್ಥಂಕರ ಹಾಗೂ ಬ್ರಹ್ಮ  ಯಕ್ಷರ 38ನೇ ವಾರ್ಷಿಕ ಪೂಜಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಪುರಾತನವಾದ ಜೈನ ಧರ್ಮದಲ್ಲಿ ಯುವ ಪೀಳಿಗೆಯಲ್ಲಿ ಸಂಪ್ರದಾಯ, ಧಾರ್ಮಿಕತೆ ಕಡಿಮೆಯಾಗುತ್ತಿದೆ ಆಧುನಿಕತೆ, ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿದ್ದು, ವಿದ್ಯಾವಂತರಿಗೆ ಸರಿಯಾದ ಹೆಣ್ಣು ಸಿಗುತ್ತಿಲ್ಲ, ಹೆಣ್ಣು ಮಕ್ಕಳಿಗೆ ಗಂಡು ಸಿಗುತ್ತಿಲ್ಲ, ಉದ್ಯೋಗ ಸಿಗುತ್ತಿಲ್ಲ ಎಂಬ ಕೊರಗಿದ್ದು ಇದೊಂದು ಯಕ್ಷ ಪ್ರಶ್ನೆ ಆಗಿದೆ ಇವುಗಳ ನಿವಾರಣೆಗೆ ಪುಣ್ಯ ಸಂಪಾದನೆ ಅಗತ್ಯವಾಗಿದೆ ಎಂದು ಭಟ್ಟಾರಕಶ್ರೀ ಗಳು , ಯುವ ಜನಾಂಗ ನಿತ್ಯ ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಬೆಳೆದಾಗ ಪುಣ್ಯ ಸಂಪಾದನೆಯಾಗಿ ಎಲ್ಲಾ ನಮ್ಮ ಬಯಕೆಗಳು ಈಡೇರಲಿದೆ,  ನಿತ್ಯ  ಬಸದಿಗೆ ಬನ್ನಿ ,ತಮ್ಮ ಕೈಲಾದ ಸಹಕಾರ ನೀಡಿ, ಸ್ವಚ್ಛತೆ ಕಾಪಾಡಿ ಇದರಿಂದ ಪುಣ್ಯ ದೊರೆಯಲಿದೆ ಎಂದರು .

    ತುಮಕೂರು ಸಮೀಪದ ಶ್ರೀ ಕ್ಷೇತ್ರ ಮಂದರಗಿರಿಯಲ್ಲಿ ಪುಣ್ಯ ಸಂಪಾದನೆಗೆ ಬಹಳಷ್ಟು ಕಾರ್ಯಗಳಿವೆ, ಆದರೆ ಅನ್ಯರು ನಿತ್ಯ ಭೇಟಿಯಿಂದ ಕಳುಷಿತಗೊಳ್ಳುತ್ತಿದೆ. ಇಂತಹ ಧರ್ಮ ಕ್ಷೇತ್ರಗಳಿಗೆ ನಿತ್ಯ ಭೇಟಿ ನೀಡಿ  ಕ್ಷೇತ್ರವನ್ನು ಉಳಿಸಿ ಬೆಳೆಸಬೇಕೆಂದರು.

    ಪರೀಕ್ಷೆ ಬಂದಾಗ  ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಸರಿಯಲ್ಲ, ನಿತ್ಯದರ್ಶನ ಅಥವಾ ಸಮಯ ಸಿಕ್ಕಾಗ ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಶ್ರೀ ಕ್ಷೇತ್ರ ಗುಂಡ್ಲಹಳ್ಳಿ ಪುರಾತನವಾದ ಕ್ಷೇತ್ರವಾಗಿದ್ದು ಪ್ರಾಕೃತಿಕತೆ , ವಿಶ್ರಾಂತಿಗೆ ಹೇಳಿ ಮಾಡಿಸಿದ ಜಾಗ ಎಂದರು.

    ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಡಿ.ಎ.ಪಣಿ ರಾಜ್ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಇಬ್ಬರು ನೋಡಲು ಅಧಿಕಾರಿಗಳನ್ನು ನೇಮಿಸುವಂತೆ ಸಲಹೆ ನೀಡಿ, ಸರ್ಕಾರದಿಂದ ಸಮಾಜಕ್ಕೆ  ಕೋಟ್ಯಾಂತರ ರೂಗಳು ಬರುತ್ತಿದೆ, ಇದು ಅನ್ಯರ ಪಾಲಾಗುತ್ತಿದ್ದು ಈ ಬಗ್ಗೆ ಕರ್ನಾಟಕ ಜೈನ ಅಸೋಸಿಯೇಷನ್ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.

    ಗೌರಿಬಿದನೂರು ಶಾಸಕ  ಕೆ.ಎಚ್. ಪುಟ್ಟಸ್ವಾಮಿ ಗೌಡ ಮಾತನಾಡಿ, ಪ್ರಪಂಚ ಅಂದಕಾರ ದಲ್ಲಿರುವಾಗ ಹುಟ್ಟಿದ ಜೈನ ಧರ್ಮ ಶ್ರೇಷ್ಠ ಧರ್ಮವಾಗಿದೆ,  ಶಾಂತಿ, ಆಹಿಂಸೆ ,ತ್ಯಾಗಕ್ಕೆ ಹೆಸರಾಗಿದೆ , ಎರಡು ಸಾವಿರದ ಆರುನೂರು  ವರ್ಷಗಳ ಹಿಂದೆಯೇ ಜೈನ ಧರ್ಮ ಪ್ರಪಂಚದಲ್ಲಿ ಪ್ರಚಲಿತದಲ್ಲಿದ್ದು, ತೀರ್ಥಂಕರರು ಸಂಸ್ಕೃತಿ, ಸಂಸ್ಕಾರ, ನೀಡಿ ಪ್ರಪಂಚಕ್ಕೆ ಪರಿಚಯಿಸಿದರು, ಈ ತ್ಯಾಗದ ಫಲವಾಗಿ ಇಂದು ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು ಉಳಿದಿವೆ ಎಂದರು.

    ಪ್ರಾಕೃತಿಕ ಸೌಂದರ್ಯ ತಂಪಾದ ಗಾಳಿ ,ಬೆಳಕು, ನೆರಳು ಹೊಂದಿರುವ ಈ ಕ್ಷೇತ್ರ ಇಲ್ಲಿ ಧ್ಯಾನ ಮಾಡಿದರೆ ಶಾಂತಿ ಸಿಗಲಿದೆ ಎಂದು ಕ್ಷೇತ್ರವನ್ನು ಪ್ರಶಂಸಿಸಿದರು.

    ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಶ್ರೀಗುಟ್ಟೆ ಬ್ರಹ್ಮದೇವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ದಿಗಂಬರ ಜೈನ  ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ.ಡಿ.ಬಾಹುಬಲಿ ಬಾಬು, ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷರು ಹಾಗೂ ತುಮಕೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಕೆ.ಪಿ.ವೀರೇಂದ್ರ, ಉದ್ಯಮಿ  ಟಿ.ಎನ್. ರಾಜೇಂದ್ರ ಪ್ರಸಾದ್,  ಟಿ.ಜೆ.ಸಂತೋಷ್,  ಕಾರ್ಯಕಾರಿ ಮಂಡಳಿ ಸದಸ್ಯರಾದ ಬೆಂಗಳೂರಿನ ಟಿ.ಎನ್.ರಾಜೇಂದ್ರ ಪ್ರಸಾದ್, ಟಿ.ಎಸ್.ಬಾನು ಕುಮಾರ್, ಟಿ.ಸಿ.ವಾಸಂತಿ ದೇವಿ, ರವಿಕಿರಣ್, ತುಮಕೂರಿನ  ಎ.ಜಿ.ನಾಗೇಂದ್ರ, ಏ.ವೈ.ಬ್ರಹ್ಮ ಪ್ರಕಾಶ್, ಎ.ಎಂ.ಜಿನಚಂದ್ರು,  ಎ.ಆರ್.ಬ್ರಹ್ಮ ಪ್ರಕಾಶ್ ಎ.ಪಿ.ವರ್ಧಮಾನ, ಆರ್.ಜೆ.ಅಭಿನಂದನ್, ಎ.ಎಸ್.ಸುನಿಲ್, ಟಿ.ಡಿ.ಮಹಾವೀರ, ಟಿ.ಎನ್.ಜಿನೇಶ್ ಕುಮಾರ್, ಎ.ಬಿ.ಅಭಿನಂದನ್, ಎ.ಎಸ್.ಚಂದ್ರ ಕೀರ್ತಿ, ಕೆ.ಬಿ.ಕಾಂತರಾಜು, ಟಿ.ಎಸ್ . ಜಯರಾಜು, ಎ.ವೈ.ನೇಮಿ ರಾಜಯ್ಯ , ಎ.ಎನ್.ಮಂಜುನಾಥ್, ಟಿ.ಎಸ್, ಪ್ರಕಾಶ್ ಜೈನ್ ಕುರಂ ಕೋಟೆ, ತೊಂಡೆ ಬಾವಿಯ ಕೆ.ಬಿ.ಜಿನಚಂದ್ರ ಜೈನ್ ಇನ್ನಿತರರು ಭಾಗವಹಿಸಿದ್ದರು.

    ಇದೇ ಸಂದರ್ಭದಲ್ಲಿ ಕೆ.ಬಿ. ಸನತ್ ಕುಮಾರ್ ಹಾಗೂ ಆರ್. ಸಿ .ಬ್ರಹ್ಮದೇವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ಪುರೋಹಿತರಾದ ಎಸ್. ಎನ್. ಜಿನ ಚಂದ್ರಯ್ಯ, ಜೆ.ಪಾರ್ಶ್ವನಾಥಯ್ಯ, ಕೆ . ಜೇ ಬ್ರಹ್ಮಾನಂದ ಹಾಗೂ  ಸ್ಥಳೀಯ ಪುರೋಹಿತರಾದ ಪಾರ್ಶ್ವನಾಥ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

    ಕಾರ್ಯಕ್ರಮದಲ್ಲಿ ಗುಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಸ್ಥಳೀಯರು, ಗುಂಡ್ಲಹಳ್ಳಿ ಜೈನ ಯುವ ಬಳಗ, ಶ್ರಾವಕ -ಶ್ರಾವಕಿಯರು ಸ್ಥಳೀಯ ಗ್ರಾಮಸ್ಥರುಗಳು ,ಮೂಡಲ ಸೀಮೇಯ ಭಕ್ತರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    ವರದಿ: ಜೆ.ರಂಗನಾಥ, ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರು ದಸರಾ ಉತ್ಸವ-2026: ಪಂಜಿನ ಕವಾಯತು ತಾಲೀಮು ವೀಕ್ಷಣೆ

    October 13, 2026

    ಅಕ್ಟೋಬರ್ 15ರಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನಾ ಸಮಾರಂಭ

    October 13, 2026

    ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

    October 13, 2026

    Comments are closed.

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ನವರಾತ್ರಿಯಲ್ಲಿ ಗರ್ಬಾ ನೃತ್ಯವನ್ನೇಕೆ ಮಾಡುತ್ತಾರೆ? ಇದರ ವಿಶೇಷ ಅರ್ಥ ಇಲ್ಲಿದೆ!

    October 15, 2026

    ನವರಾತ್ರಿ ಬಂತೆಂದರೆ ದುರ್ಗಾದೇವಿಯ ಆರಾಧನೆಯ ಜೊತೆಗೆ ಬಣ್ಣಬಣ್ಣದ ಉಡುಪುಗಳು, ಸಂಗೀತದ ಲಯಕ್ಕೆ ಹೆಜ್ಜೆ ಹಾಕುವ ಗರ್ಬಾ ನೃತ್ಯವೂ ಗಮನ ಸೆಳೆಯುತ್ತದೆ.…

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?

    October 15, 2026

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.