ಕೊರಟಗೆರೆ: ತುಮುಲ್ ಕೊರಟಗೆರೆ ತಾಲೂಕು ನಿರ್ದೇಶಕ ಸ್ಥಾನಕ್ಕೆ ಎನ್ ಡಿ ಎ ಪಕ್ಷದ ಅಭ್ಯರ್ಥಿಯಾಗಿ ಸುಂಕದಹಳ್ಳಿ ಸಿದ್ದಗಂಗಯ್ಯ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಘೋಷಣೆ ಮಾಡಿದ್ದಾರೆ.
ತುಮಕೂರು ಹಾಲು ಒಕ್ಕೂಟದ ತೆರವಾಗಿರುವ ನಿರ್ದೇಶಕರುಗಳ ಸ್ಥಾನಕ್ಕೆ ನವಂಬರ್ ನಲ್ಲಿ ಚುನಾವಣೆ ಘೋಷಣೆಯಾಗಿದ್ದು, ಕೊರಟಗೆರೆ ತಾಲೂಕಿನ ಮೈತ್ರಿ ಪಕ್ಷದ ಎಲ್ಲಾ ಅಧ್ಯಕ್ಷರು ಮುಖಂಡರುಗಳು ಕಾರ್ಯಕರ್ತರು ಸೇರಿ ಅಂತಿಮ ಅಭ್ಯರ್ಥಿಯಾಗಿ ಸುಂಕದಹಳ್ಳಿ ಸಿದ್ದಗಂಗಯ್ಯ ಅವರನ್ನ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಅನಿಲ್ ಕುಮಾರ್ ತಿಳಿಸಿದರು.
ಇದೇ ವೇಳೆ ಮಾಜಿ ಶಾಸಕ ಸುಧಾಕರ್ ಲಾಲ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಒಂದಾದ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷಗಳಿಂದ ಎನ್ ಡಿ ಎ ಒಕ್ಕೂಟದಿಂದ ಇದೀಗ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು ನಮ್ಮ ಕೊರಟಗೆರೆ ತಾಲೂಕು ಅಭ್ಯರ್ಥಿಯಾಗಿ ಎರಡು ಪಕ್ಷದ ಒಮ್ಮತದಿಂದ ಸುಂಕದಹಳ್ಳಿ ಸಿದ್ದಗಂಗಯ್ಯ ಅವರನ್ನ ಚುನಾವಣೆಗೆ ನಿಲ್ಲಿಸಲಾಗಿದ್ದು ಅವರನ್ನ ಬಹುಮತಗಳಿಂದ ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ತುಮಲ್ ನಿರ್ದೇಶಕ ಸ್ಥಾನದ ಎನ್.ಡಿ.ಎ ಅಭ್ಯರ್ಥಿ ಸುಂಕದಹಳ್ಳಿ ಸಿದ್ದಗಂಗಯ್ಯ ಮಾತನಾಡಿ, ಈಗಾಗಲೇ ಸುಂಕದ ಹಳ್ಳಿ ಹಾಲಿನ ಡೈರಿಯ ಅಧ್ಯಕ್ಷನಾಗಿ ತಾಲೂಕಿನ ರೈತರ ಕಷ್ಟ ಸುಖಗಳನ್ನು ಅರಿತಿದ್ದೇನೆ ರೈತರ ಕಷ್ಟಗಳಿಗೆ ಸ್ಪಂದಿಸುತ್ತೇನೆ, ನನ್ನ ಕೆಲಸ ಕಾರ್ಯಗಳನ್ನು ಮೆಚ್ಚಿ ಇದೀಗ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷದಿಂದ ತುಮುಲ್ ಕೊರಟಗೆರೆ ತಾಲೂಕು ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅತಿ ಹೆಚ್ಚು ಮತಗಳಿಂದ ನನ್ನ ಗೆಲುವನ್ನ ಸಾಧಿಸಿ, ನಮ್ಮ ತಾಲೂಕಿನ ರೈತರಿಗೆ ಅತಿ ಹೆಚ್ಚು ಅನುಕೂಲ ಮಾಡಿಕೊಡುತ್ತೇನೆ. ಹಾಗೆಯೇ ನನ್ನನ್ನು ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಎರಡು ಪಕ್ಷದ ನಾಯಕರು ಮುಖಂಡರು ಕಾರ್ಯಕರ್ತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ದರ್ಶನ್, ಜೆಡಿಎಸ್ ಪಕ್ಷದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಮಯ್ಯ , ಕಾರ್ಯದಕ್ಷ ನರಸಿಂಹರಾಜು ಸೇರಿದಂತೆ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು, ಯುವ ಮುಖಂಡರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296