nammatumakuru

    Subscribe to Updates

    Get the latest creative news from FooBar about art, design and business.

    What's Hot

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026
    Facebook Twitter Instagram
    ಟ್ರೆಂಡಿಂಗ್
    • 2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
    • ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ
    • ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ
    • ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ
    • ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೊಸದಾಗಿ ಪ್ರಜಾ ಸೇವಾ ಇಲಾಖೆ ಸೃಜನೆ: ಡಿಸಿಎಂ ಡಾ.ಜಿ. ಪರಮೇಶ್ವರ
    • ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026: ತುಮಕೂರು ನಗರದಲ್ಲಿ ಎಸ್ ಐಆರ್ ನೋಟೀಸ್ ವಿಚಾರಣೆ ಆರಂಭ
    • ಸೋಮಾರಿ ಅಧಿಕಾರಿಗಳನ್ನು ಬದಲಿಸದಿದ್ದರೆ ಸರ್ಕಾರದ ಯಾವ ಅಭಿಯಾನ ಬಂದು ಏನು ಪ್ರಯೋಜನ?
    • ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ: ಡಿಸಿಎಂ ಡಾ.ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿದ್ಯಾ ವಿಕಾಸ ಯೋಜನೆಯಡಿ ಕಳಪೆಯಿಂದ ಕೂಡಿದ ಸಮವಸ್ತ್ರ ಪೂರೈಕೆ
    ರಾಜ್ಯ ಸುದ್ದಿ May 25, 2024

    ವಿದ್ಯಾ ವಿಕಾಸ ಯೋಜನೆಯಡಿ ಕಳಪೆಯಿಂದ ಕೂಡಿದ ಸಮವಸ್ತ್ರ ಪೂರೈಕೆ

    By adminMay 25, 2024No Comments3 Mins Read
    students

    ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ 2024-25ನೇ ಸಾಲಿಗೆ ಶಾಲಾ ಮಕ್ಕಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳೇ ಕಳಪೆಯಿಂದ ಕೂಡಿವೆ. ಕಲಬುರಗಿ ವಿಭಾಗ ಸೇರಿದಂತೆ ರಾಜ್ಯದ ಇನ್ನಿತರ ವಿಭಾಗಗಳ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಸಮವಸ್ತ್ರ ಬಟ್ಟೆಗಳ ಮಾದರಿಗಳನ್ನು ಪರಿಶೀಲಿಸಿರುವ ಕೇಂದ್ರೀಯ ರೇಷ್ಮೆ ಮಂಡಳಿಯು ಈಗಾಗಲೇ ಹಲವು ಜಿಲ್ಲೆಗಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳನ್ನು ತಿರಸ್ಕರಿಸಿದೆ.

    ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರಿಗೆ ಪತ್ರ (ಅ.ಸ.ಪ. ಸಂ; ಇಪಿ 170 ಯೋಸಕ 2024) ಬರೆದಿದ್ದಾರೆ. ಈ ಪತ್ರದ ಪ್ರತಿಯು the-file. in’ಗೆ ಲಭ್ಯವಾಗಿದೆ.

    ಸಮವಸ್ತ್ರ ಹೊಲಿಗೆ ವೆಚ್ಚವನ್ನೂ ಪೋಷಕರಿಂದಲೇ ಭರಿಸಿಕೊಂಡಿರುವ ಸರಕಾರವು ಇದೀಗ ಪೂರೈಕೆ ಮಾಡಿರುವ ಸಮವಸ್ತ್ರವು ಕಳಪೆಯಿಂದ ಕೂಡಿದೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯ ಕುರಿತು ಸಚಿವ ಮಧು ಬಂಗಾರಪ್ಪ ಅವರೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

    ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಂಬಂಧ 2023ರ ಡಿಸೆಂಬರ್ 8 ಮತ್ತು 2024ರ ಮಾರ್ಚ್ 15ರಂದು ಆದೇಶ ಹೊರಡಿಸಿದ್ದರು. ಅಲ್ಲದೇ ಸಮವಸ್ತ್ರ ಸರಬರಾಜಿಗೂ ಮುನ್ನ ಅಂದರೆ 2024ರ ಮಾರ್ಚ್ 30ರಂದೇ ಸಮವಸ್ತ್ರಗಳ ಸ್ಯಾಂಪಲ್ ‌ಗಳನ್ನು ಪರಿಶೀಲನೆಗೆ ಸಲ್ಲಿಸಲಾಗಿತ್ತು. ಈ ಸ್ಯಾಂಪಲ್‌ ಗಳನ್ನು ಪರಿಶೀಲಿಸಿದ್ದ ಕೇಂದ್ರೀಯ ರೇಷ್ಮೆ ಮಂಡಳಿಯು 2024ರ ಮೇ 8ರಂದು ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂಬುದು ಪತ್ರದಿಂದ ತಿಳಿದು ಬಂದಿದೆ.

    ಸಮವಸ್ತ್ರಗಳ ಗುಣಮಟ್ಟ ಪರೀಕ್ಷೆ ಸಂಬಂಧ ಕರಾರು ಒಪ್ಪಂದದ ಕ್ರಮ ಸಂಖ್ಯೆ 4ರ ಪ್ರಕಾರ ಸರಬರಾಜಿಗೂ ಮುನ್ನ ತಯಾರಾಗಿರುವ ಸಮವಸ್ತ್ರ ಬಟ್ಟೆಗಳಲ್ಲಿ ಪ್ರತಿ 25000 ಮೀಟರ್ ಗೆ ಒಂದು ಸ್ಯಾಂಪಲ್‌ ನಂತೆ 2024ರ ಮಾರ್ಚ್ 300 m 46, 14 ಹಾಗೂ ಸ್ಕರ್ಟಿಂಗ್ 20 ಸ್ಯಾಂಪಲ್‌ ಗಳನ್ನು ಪಡೆದಿತ್ತು. ಅಲ್ಲದೇ ಈ ಸ್ಯಾಂಪಲ್‌ ಗಳ ಗುಣಮಟ್ಟ ಪರಿಶೀಲಿಸಲು 2024ರ ಎಪ್ರಿಲ್ 2ರಂದು ಕೇಂದ್ರ ರೇಷ್ಮೆ ಮಂಡಳಿಗೆ ಸಲ್ಲಿಸಿತ್ತು ಎಂಬುದು ಗೊತ್ತಾಗಿದೆ. ‘ಷರ್ಟಿಂಗ್ ಬಟ್ಟೆಯ ಎಲ್ಲಾ 46 ಸ್ಯಾಂಪಲ್ ಗಳು ಕಾಂಪೋಸಿಷನ್‌ ನಲ್ಲಿ ತಿರಸ್ಕೃತವಾಗಿರುತ್ತವೆ ಹಾಗೂ ಇಲಾಖೆಯು ನಿಗದಿಪಡಿಸಿದ್ದ ಮಾನದಂಡಗಳಿಗಿಂತಲೂ ಜಿಎಸ್‌ಎಂ ಕಡಿಮೆ ಇರುತ್ತದೆ. ಸ್ಕರ್ಟಿಂಗ್‌ ನ 20 ಸ್ಯಾಂಪಲ್‌ ಗಳಲ್ಲಿ 12 ಸ್ಯಾಂಪಲ್ ‌ಗಳ ಕಾಂಪೋಸಿಷನ್, ಇಲಾಖೆ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಇರುವುದಿಲ್ಲ ಎಂದು ಕೇಂದ್ರ ರೇಷ್ಮೆ ಮಂಡಳಿಯು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

    ಸದ್ಯ ಸರಬರಾಜಾಗಿರುವ ಸಮವಸ್ತ್ರಗಳು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೋದಾಮಿನಲ್ಲಿವೆ. ಈ ಸಮವಸ್ತ್ರಗಳ ಎಲ್ಲಾ ಷರ್ಟಿಂಗ್ ಬಟ್ಟೆಗಳನ್ನು 30 ದಿನದೊಳಗೆ ಮರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತ ರಿತೇಶ್ ಕುಮಾರ್ ಸಿಂಗ್ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

    ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರಕಾರವು ಶಾಲಾ ವಿದ್ಯಾರ್ಥಿಗಳ ಎರಡನೇ ಜೊತೆ ಸಮವಸ್ತ್ರ ಬಟ್ಟೆಯನ್ನಷ್ಟೇ ನೀಡಿ ಕೈತೊಳೆದುಕೊಂಡಿತ್ತು. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸಮವಸ್ತ್ರದ ಹೊಲಿಗೆ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಇಲಾಖೆಯು ಹೊರಡಿಸಿದ್ದ ಸುತ್ತೋಲೆಯು ಹೈಕೋರ್ಟ್ ಆದೇಶವನ್ನು ನೇರಾ ನೇರ ಉಲ್ಲಂಘಿಸಿದಂತಾಗಿತ್ತು.

    ಸಮವಸ್ತ್ರದ ಬಟ್ಟೆಯನ್ನು ಮಾತ್ರ ಸರಕಾರದಿಂದ ಉಚಿತವಾಗಿ ನೀಡುತ್ತಿದ್ದು ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಸುತ್ತೋಲೆಯನ್ನು ಸುಚಿವ ಮಧು ಬಂಗಾರಪ್ಪ ಅವರು ಅನುಮೋದಿಸಿದ್ದರು.

    ಬಟ್ಟೆಯ ಬೆಲೆಗಿಂತ ಹೊಲಿಗೆ ವೆಚ್ಚ ಹೆಚ್ಚಾಗಿದೆ ಒಂದು ಸೆಟ್ ಶರ್ಟ್ ಮತ್ತು ಪ್ಯಾಂಟ್‌ಗೆ ಹೊಲಿಗೆ ವೆಚ್ಚ ಕನಿಷ್ಠ 350 ರೂ.ನಿಂದ 800 ರೂ. ವರೆಗೆ ಖರ್ಚು ಮಾಡಿದ್ದರು. ಮಾಸ್ಟರ್ ಮಂಜುನಾಥ್ ಪ್ರಕರಣದಲ್ಲಿ ಎರಡನೇ ಸೆಟ್ ಗೆ ಹೊಲಿಗೆ ಹಾಕಿದ ಸಮವಸ್ತ್ರವನ್ನು ಸರಕಾರ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯವು ಆದೇಶಿಸಿತ್ತು. ಆದರೀಗ ಹೊಲಿಗೆ ಹಾಕದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.

    ರಾಜ್ಯದ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಿಸಿರಲಿಲ್ಲ. ಸ್ವೀಕರಿಸಿದ್ದ ಉಚಿತ ಸಮವಸ್ತ್ರಗಳನ್ನು ದೀರ್ಘಕಾಲದವರೆಗೂ ಗೋದಾಮಿನಲ್ಲಿಡಲಾಗುತ್ತಿದೆಯೇ ವಿನಃ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುತ್ತಿಲ್ಲ ಎಂಬುದು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ತಪಾಸಣೆಯು ಬಹಿರಂಗಗೊಳಿಸಿತ್ತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     

    admin
    • Website

    Related Posts

    ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ: ಡಿಸಿಎಂ ಡಾ.ಜಿ. ಪರಮೇಶ್ವರ್

    September 6, 2026

    ನೇಪಾಳ ಪ್ರವಾಹ ದುರಂತ: ಸಂತ್ರಸ್ತ ಕುಟುಂಬಸ್ಥರ DNA ಮಾದರಿ ಸಂಗ್ರಹಕ್ಕೆ ಮುಂದಾದ ಸರ್ಕಾರ

    September 5, 2026

    ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 7.5 ರಷ್ಟು ಮೀಸಲಾತಿ ಘೋಷಿಸಿದ ಸರ್ಕಾರ!

    September 5, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ತುಮಕೂರು: ಪತ್ನಿಯನ್ನು ಮಾಡಿದ ಗಂಡನಿಗೆ ನಗರದ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು…

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026

    ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ

    September 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.