ಹೆಚ್.ಡಿ.ಕೋಟೆ: ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕು ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕು ಹಿರೇಹಳ್ಳಿ ಗ್ರಾಮದ ಪುಟ್ಟಮಲ್ಲಪ್ಪ ಎಂಬುವವರ ಪುತ್ರಿ ಕವಿತಾ ಸಾವನ್ನಪ್ಪಿದ ಯುವತಿಯಾಗಿದ್ದಾಳೆ. ಸುಮಾರು ಎರಡು ಮೂರು ತಿಂಗಳ ಹಿಂದೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದ ಪುಟ್ಟಪ್ಪ ಎಂಬುವವರ ಮಗ ಜಗ ಆಲಿಯಾಸ್ ನಿರಂಜನ್ ಎಂಬುವವನ ಜೊತೆ ಈಕೆಯನ್ನು ನಿಶ್ಚಿತಾರ್ಥ ಮಾಡಲಾಗಿತ್ತು.
ನಿಶ್ಚಿತಾರ್ಥ ಆದಾಗಿನಿಂದ ಜಗ ಪ್ರತಿ ನಿತ್ಯ ಪುಟ್ಟಮಲ್ಲಪ್ಪ ಮನೆಗೆ ಬಂದು ಉಳಿದು ಹೋಗುತಿದ್ದ. ಮದುವೆಗೆ ಇನ್ನೂ ಕೇವಲ ಇಪ್ಪತ್ತು ದಿನ ಮಾತ್ರ ಇತ್ತು. ಎಂದಿನಂತೆ ಜಗ ಎರಡು ಗಂಟೆ ಸಮಯದಲ್ಲಿ ಹಿರೇಹಳ್ಳಿ ಗ್ರಾಮದ ಪುಟ್ಟಮಲ್ಲಪ್ಪ ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಮನೆಯಲ್ಲಿ ಕವಿತಾ ತಂದೆ ತಾಯಿ ಕೂಲಿಗೆ ಹೋಗಿದ್ದರಿಂದ ಮನೆಯಲ್ಲಿ ಕವಿತಾ ಒಬ್ಬಳ್ಳೇ ಇದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆತ ಬಂದ ಹೋದ ಬಳಿಕ ಕವಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಜೊತೆಗೆ ಮನೆಯ ಹೆಂಚು ತೆಗೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕವಿತಾಳನ್ನು ಕೊಲೆ ಮಾಡಿ ಜಗ ಆಲಿಯಾಸ್ ನಿರಂಜನ್ ಹೆಂಚು ತೆಗೆದು ಪರಾರಿ ಯಾಗಿದ್ದಾನೆ ಎಂದು ಕುತುಂಬಸ್ಥರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶಂಕಿತ ಆರೋಪಿ ಜಗ ಆಲಿಯಾಸ್ ನಿರಂಜನ್ ನನ್ನು ಬಂಧಿಸಲು ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಮತ್ತು ತಂಡ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ (K.R.ಆಸ್ಪತ್ರೆ )ಶವಗಾರಕ್ಕೆ ರವಾನಿಸಲಾಗಿದೆ.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296