ಏರ್ ಶೋ ಸಂದರ್ಭ ಎರಡು ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದ ಪರಿಣಾಮ, ಓರ್ವ ಪೈಲಟ್ ಸಾವನ್ನಪ್ಪಿ ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಫೋರ್ಚುಗಲ್ ನಲ್ಲಿ ನಡೆದಿದೆ.
ಈ ಕುರಿತು ಭಯಾನಕ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಬೆಜಾ ಏರ್ ಶೋ ಸಂದರ್ಭದಲ್ಲಿ ಆರು ವಿಮಾನಗಳು ಹಾರಾಟ ನಡೆಸುತ್ತಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡ ಒಂದು ವಿಮಾನ ಅಡ್ಡಾದಿಡ್ಡಿ ಹಾರಲಾರಂಭಿಸಿದೆ. ನಂತರ ಹಾರಾಟದಲ್ಲಿದ್ದ ಮತ್ತೊಂದು ವಿಮಾನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಎರಡು ವಿಮಾನಗಳು ನೆಲಕ್ಕೆ ಉರುಳಿವೆ. ಈ ಘಟನೆ ನಡೆದ ಬಳಿಕ ಏರ್ ಶೋ ಅನ್ನು ಸ್ಥಗಿತಗೊಳಿಸಲಾಗಿದೆ.
ಈ ಭೀಕರವಾದ ಅಪಘಾತದಿಂದಾಗಿ ಒಂದು ವಿಮಾನದ ಪೈಲೆಟ್ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


