ಮಂಗನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಿ ದೃಷ್ಟಿ ಮರಳಿಸಿ ವೈದ್ಯರು ಮಾನವೀಯತೆ ಮೆರೆದ ಘಟನೆ ಹರಿಯಾಣದಲ್ಲಿ ನಡೆದಿದೆ. ಮನುಷ್ಯರಂತೆ ಮಂಗಕ್ಕೂ ಕೂಡ ಕಣ್ಣಿನ ಪೊರೆ ಸಮಸ್ಯೆ ಕಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಲುವಾಸ್ ನಲ್ಲಿನ ಅನಿಮಲ್ ಸರ್ಜರಿ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಆರ್ ಎನ್ ಚೌಧರಿ ಮಂಗವನ್ನು ಹಂಸಿಯ ಪ್ರಾಣಿ ಪ್ರೇಮಿ ಮುನೀಶ್ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ. ಮಂಗಕ್ಕೆ ಕಣ್ಣು ಕಾಣದ ಹಿನ್ನೆಲೆಯಲ್ಲಿ ಹೇಗೋ ವಿದ್ಯುತ್ ತಂತಿ ಮೇಲೆ ಹಾರಿದ ಪರಿಣಾಮ ವಿದ್ಯುತ್ ಪ್ರವಹಿಸಿತ್ತು ಹೀಗಾಗಿ ಕುಂಟುತ್ತಾ ನಡೆಯುತ್ತಿತ್ತು ಎನ್ನಲಾಗಿದೆ. ಅದಕ್ಕೆ ಚಿಕಿತ್ಸೆ ಕೊಡಿಸಬೇಕೆಂದು ಕರೆದೊಯ್ದಾಗ ಕಣ್ಣು ಕಾಣಿಸದಿರುವುದು ಗೊತ್ತಾಗಿದೆ. ನಂತರ ಚಿಕಿತ್ಸೆಗಾಗಿ ಕೋತಿಯನ್ನು ಲುವಾಸ್ ನ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಕರೆದೊಯ್ದು, ಪರೀಕ್ಷೆ ನಡೆಸಿ ಎರಡು ಕಣ್ಣುಗಳಿಗೆ ಬಂದಿದ್ದ ಪೊರೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


