ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಟ್ರಾಫಿಕ್ ಫೈನ್ ವಸೂಲಿ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ, ಸುಭಿರ್ ಮಲ್ಲಿಕ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳು ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್ ಸೈಟ್‌ನಲ್ಲಿ ಫೈನ್ ವಿಭಾಗದಲ್ಲಿ ಒಂದಷ್ಟು ವಾಹನಗಳ ನೋಂದಣಿ ಸಂಖ್ಯೆಗಳನ್ನು ಹಾಕಿ ಶೋಧಿಸಿದ್ದಾರೆ.
ಆಗ ದಂಡ ಬಾಕಿರುವ ವಾಹನಗಳ ಸಂಖ್ಯೆಗಳನ್ನು ಗುರುತಿಸಿಕೊಂಡು, ಅವುಗಳನ್ನು ಕರ್ನಾಟಕ ಸಾರಿಗೆ ಇಲಾಖೆಯ ವೆಬ್ ಸೈಟ್ ಗಳಲ್ಲಿ ದಾಖಲಿಸಿ, ವಾಹನಗಳ ಮಾಲೀಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದರು. ಬಳಿಕ ನಿರ್ದಿಷ್ಟ ವಾಹನ ಮಾಲೀಕರ ವಾಟ್ಸ್ ಆ್ಯಪ್ ಗೆ ನಾವು ಟ್ರಾಫಿಕ್ ಪೊಲೀಸರು ಹೇಳಿಕೊಂಡು ದಂಡ ಕಟ್ಟುವಂತೆ ಕ್ಯೂಆರ್ ಕೋಡ್ ಸಮೇತ ಸಂದೇಶ ಹಾಗೂ ಮೃತ ಭಕ್ತರಾಮ್ ಗುರುತಿನ ಚೀಟಿ ಕೂಡ ಕಳುಹಿಸಿದ್ದರು.
ಅದನ್ನು ನಂಬಿದ ನೂರಾರು ಮಂದಿ ದಂಡ ಪಾವತಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಮೃತ ಹೆಡ್ ಕಾನ್ಸ್ ಟೇಬಲ್ ಮಗಳು ದೂರು ನೀಡಿದ್ರು. ಈ ಸಂಬಂಧ ಆಕೆ ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೂರು ಮೊಬೈಲ್ ಗಳು, ಬ್ಯಾಂಕ್ ಖಾತೆಗಳ ಜಪ್ತಿ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


