ಕನ್ನಡವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್ ಇದೀಗ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ, ಸಿದ್ದು ಜೊನ್ನಲಗಡ್ಡ ಜೊತೆಯಾಗಿ ನಟಿಸಿ ಅಭಿಮಾನಿಗಳಿಗೆ ಮತ್ತೇರಿಸುವಂತ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಅನುಪಮಾ ಪರಮೇಶ್ವರನ್ ಅವರು ತೆರೆಮೇಲೆ ಕಿಸ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದೇ ಮೊದಲ ಬಾರಿಗೆ ಅವರು ಆ ರೀತಿಯ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಟ್ರೇಲರ್ ಗಮನ ಸೆಳೆದಿದೆ.
ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ. ಟಿಲ್ಲು ಸ್ಕ್ವೇರ್ ಸ್ವೀಕೆಲ್ ಸಿನಿಮಾ. ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ಡಿಜೆ ಟಿಲ್ಲು ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಟಿಲ್ಲು ಸ್ಕ್ವೇರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಅನುಪಮಾ ಅಚ್ಚರಿ ಎನ್ನುವಂತೆ ಬೋಲ್ಡ್ ಸ್ಟೆಪ್ ಇಟ್ಟಿದ್ದಾರೆ. ಈ ಸಿನಿಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ್ ವಂಶಿ ನಿರ್ಮಾಣ ಮಾಡಿದ್ದಾರೆ.
ಟಿಲ್ಲು ಸ್ಕ್ವೇರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 29ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಅನುಪಮಾ ಲಿಪ್ ಲಾಕ್ ದೃಶ್ಯಗಳ ಮೂಲಕ ಗಮನ ಸೆಳೆದಿದ್ದಾರೆ.