ಬೆಂಗಳೂರು: ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಜೂ. 1 ರಿಂದ ಐದು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೂನ್ 1 ರಿಂದ 4 ರ ವೆರೆಗೆ ಸಿಲಿಕಾನ್ ಸಿಟಿಯ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಆಗಲಿದ್ದು ಮತ್ತೆ ಜೂನ್ 5 ಬಾರ್ ಓಪನ್ ಆಗಲಿದೆ. ಮತ್ತೆ ಜೂನ್ 6 ನೇ ತಾರೀಖು ಮದ್ಯ ಮಾರಾಟ ಬಂದ್ ಇರಲಿದೆ.
ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ಹಿನ್ನೆಲೆ ಜೂನ್ 1 ರ ಮಧ್ಯಾಹ್ನ 4 ಗಂಟೆಯಿಂದ ಜೂನ್ 3 ರ ವರೆಗೆ ಕ್ಲೋಸ್ ಮಾಡುವಂತೆ ಆದೇಶ ನೀಡಲಾಗಿದೆ. ಮತ್ತೆ ಜೂನ್ 4 ರಂದು ಲೋಕಸಭೆಯ ಮತ ಎಣಿಕೆ ಇರುವ ಕಾರಣ ಅಂದು ಸಹ ಇಡೀ ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ವೈನ್ ಶಾಪ್ ಕ್ಲೋಸ್ ಆಗಲಿದೆ. ಇನ್ನು ಜೂನ್ 6 ರಂದು ಎಂಎಲ್ ಸಿ ಮತ ಎಣಿಕೆ ಇರೋದಿಂದ ಅಂದು ಸಹ ಡ್ರೈ ಡೇ ಎಂದು ಘೋಷಣೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


