ಶಿವಮೊಗ್ಗ: ಬೆಳಗ್ಗೆ ಮಟನ್ ಶಾಪ್ ಗೆ ಹೋಗಿದ್ದ ಗ್ರಾಹಕ ತಾನು ಖರೀದಿ ಮಾಡಿದ ಮಟನ್ ಗೆ ಒಂದೆರಡು ಪೀಸ್ ಹೆಚ್ಚಾಗಿ ಹಾಕುವಂತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ನಡೆದು ಅಂಗಡಿಯಲ್ಲಿದ್ದ ಅಪ್ರಾಪ್ತ ಬಾಲಕ ಗ್ರಾಹಕನ ತಲೆಗೆ ಕತ್ತಿಯಿಂದ ಹೊಡೆದಿರುವ ಘಟನೆ ಶಿವಮೊಗ್ಗದ ಟಿಪ್ಪು ನಗರದ ಮಟನ್ ಸ್ಟಾಲ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮಟನ್ ಅಂಗಡಿಯ ಬಳಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ನಡೆದ ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಶಿವಮೊಗ್ಗದ ಗಾಡಿ ಕೊಪ್ಪದ ತಾಂಡ ನಿವಾಸಿ ಮಲ್ಲೇಶ್(45) ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದ್ದು, ಕುಡಿದ ಮತ್ತಿನಲ್ಲಿ ಮಲ್ಲೇಶ್ ಮಟನ್ ಅಂಗಡಿಗೆ ಹೋಗಿದ್ದನು. ಅಂಗಡಿಯಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕನಿಗೆ ಮಟನ್ ಪಡೆದ ಮೇಲೆ ಇನ್ನೂ ಹೆಚ್ಚು ಹಾಕುವಂತೆ ಗಲಾಟೆ ಮಾಡಿದ್ದನು. ಈ ವೇಳೆ ಗಲಾಟೆ ತಾರಕಕ್ಕೇರಿದ್ದು, ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.
ಈ ವೇಳೆ ಕೈಯಲ್ಲಿದ್ದ ಮಟನ್ ಕತ್ತರಿಸುವ ಕತ್ತಿಯಿಂದ ಯುವಕ ಗ್ರಾಹಕನ ತಲೆಗೆ ಹೊಡೆದಿದ್ದಾನೆ. ಹೊಡೆದ ಪರಿಣಾಮ ತಲೆಯಿಂದ ತೀವ್ರ ರಕ್ತಸ್ರಾವ ಆಗಿ ಗ್ರಾಹಕ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಆಂಬುಲೆನ್ಸ್ ಕರೆಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಹಲ್ಲೆ ಮಾಡಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


