ಬೇಲೂರು: ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ಐತಿಹಾಸಿಕ ತಾಣ ಜೈನರ ಗುತ್ತಿಯ ಶ್ರೀ ಪಂಚ ಕಲ್ಯಾಣ ಮಹೋತ್ಸವದ ಪ್ರತಿಷ್ಠಾ ಮಹೋತ್ಸವದಲ್ಲಿ ತುಮಕೂರು ಜೈನ ಸಮಾಜದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದರು.
ಕಾರ್ಯಕ್ರಮದ ಅಂಗವಾಗಿ ತುಮಕೂರಿನ ಜೈನ ಬಾಂಧವರು, ಶ್ರೀ ಮಂದಾರ ಗಿರಿಯಾತ್ರ ಸಂಘ ಸೇರಿದಂತೆ ಜೈನ ಪ್ರವಾಸಿ ತಂಡಗಳು ತಂಡ ಇನ್ನಿತರ ಸಂಘ-ಸಂಸ್ಥೆಗಳು ಭೇಟಿ ನೀಡಿ ಶ್ರೀ ಪಾರ್ಶ್ವನಾಥ ಬಸದಿ ,ಶ್ರೀ ಶೀತಲನಾಥ ತೀರ್ಥಂಕರ ವಿಗ್ರಹ ಶ್ರೀ ಮುನಿಸುವೃತ ನಾಥ ಪ್ರತಿಮೆಗಳ ದರ್ಶನ ಮಾಡಿ ಪುನೀತರಾದರು.
ಇದಕ್ಕೂ ಮೊದಲು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ,ನಿಟ್ಟೂರು ಗ್ರಾಮದ ಶ್ರೀ ಶಾಂತಿನಾಥ ತೀರ್ಥಂಕರ ಹಾಗೂ ಮಾತೇ ಶ್ರೀ ಜ್ವಾಲಾ ಮಾಲಿನಿಯ ದರ್ಶನ ಪಡೆದ ಜಿನ ಬಂಧುಗಳು, ಪ್ರಸಿದ್ಧವಾದ ಬಸದಿಯ ಶಿಲ್ಪಕಲೆಯ ಸೂಕ್ಷ್ಮ ಕೆತ್ತನೆ ಕುಸರಿಯ ಸವಿ ಸವಿದರು.
ನಂತರ ಅದೇ ತಾಲೂಕಿನ ಮುಸುಕುಂಡಿ ಮುಸು ಕೊಂಡ್ಲಿ ಗ್ರಾಮದ ಶ್ರೀ ಮಹಾವೀರ ಜೈನಬಸದಿಯ ದರ್ಶನ ಪಡೆದ ಶ್ರಾವಕರು, ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಹೊಯ್ಸಳ ವಾಸ್ತುಶಿಲ್ಪದ ಶ್ರೀ ಸಹಸ್ರಕೂಟ ಜಿನಮಂದಿರ ದರ್ಶನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅದಿ ತಾಲೂಕಿನ ಜಾವಗಲ್ಲ ಶ್ರೀ ಚಂದ್ರನಾಥ ಜೈನಬಸದಿಯ ದರ್ಶನ ಪಡೆದಶ್ರಾವಕರು , ನಂತರ ಹಾಸನ ಜಿಲ್ಲೆ, ಬೇಲೂರು ತಾಲೂಕಿನ, ಹೊಯ್ಸಳರ ರಾಜಧಾನಿಯಾಗಿದ್ದ (ದ್ವಾರಸಮುದ್ರ) ಹಳೆಬೀಡಿನ ಹೊಯ್ಸಳ ವಾಸ್ತುಶಿಲ್ಪದ ಕತ್ತಲೆ ಬಸದಿ,( ಶ್ರೀ ಪಾರ್ಶ್ವನಾಥ ಬಸದಿ )ಜೈನ ಬಸದಿಗಳ ಸಮೂಹ ದಲ್ಲಿರುವ ಬಸದಿಗಳ ದರ್ಶನ ಪಡೆದರು.
ಈ ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರ ಸಂಘದ ಅಧ್ಯಕ್ಷ ಹಾಗೂ ತುಮಕೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಕೆ.ಪಿ .ವೀರೇಂದ್ರ, ಶ್ರೀ ಪಾರ್ಶ್ವನಾಥ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಫ್ಲವರ್ ಸುರೇಶ್, ತುಮಕೂರಿನ ಶ್ರುತ ಜೈನ್ ಮಹಿಳಾ ಮಿಲನ್ ಶ್ಯಾಮಲ ಧರಣೀಂದ್ರಯ್ಯ ,ಮಂಜುಳಾ ಚಂದ್ರಪ್ರಭ, ಸುಜಾತ ವೀರೇಂದ್ರ, ಪದ್ಮ ಸುರೇಂದ್ರ, ಕೆ.ಇ.ಬಿ. ಪದ್ಮ, ಸವಿತಾ ಸುಬೋದ್ ಕುಮಾರ್ ಜೈನ್, ಶ್ರಾವoದನಹಳ್ಳಿ ಲೀಲಾವತಿ, ಶ್ರೀ ಜ್ವಾಲಾ ಮಾಲಿನಿ ಯಾತ್ರಾ ಸಂಘದ ಎನ್. ಜೆ . ಸತ್ಯೇಂದ್ರ ಕುಮಾರ್, ತುಮಕೂರಿನ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿ ಅಧ್ಯಕ್ಷ ಟಿ.ಡಿ. ಬಾಹುಬಲಿ ಬಾಬು, ಖಜಾಂಚಿ ಸುಭೋದ ಕುಮಾರ್ ಜೈನ್, ಕಾರ್ಯದರ್ಶಿ ಡಿ.ಜೆ .(ಮಂಡಿ) ನಾಗರಾಜ್, ಬ್ರಹ್ಮ ಪ್ರಕಾಶ್, ನಿರ್ದೇಶಕರಾದ ಎ.ಎನ್. ಮಂಜುನಾಥ್ ,ಜ್ವಾಲಾ ಮಾಲಿನಿ, (ಎಂ.ಎಲ್.ಎ.ಮಾಲಮ್ಮ ) ಬಳೆ ಶೀತಲ್, ಮಹಾವೀರ್, ಶ್ರೀ ಪಾರ್ಶ್ವನಾಥ ಟೂರಿಸ್ಟ್ ನ ಬಿ.ಜಿ . ಮಹಾವೀರ್, ಬೆಳಗುಲಿ ವಿಜಯಕುಮಾರ್ ,ತಂಡಗ ಜೈನ ಸಮಾಜದ ಅಧ್ಯಕ್ಷ ತಂ.ಪಾ. ಚಂದ್ರ ಕೀರ್ತಿ , ಸಂಕಿ ಘಟ್ಟ ಮತ್ತುಕುಣಿಗಲ್ ಜೈನ ಸಮಾಜದ ಅಧ್ಯಕ್ಷ ಮೋಹನ್ ಕುಮಾರ , ಕಾರ್ಯದರ್ಶಿ ಜ್ವಾಲಿಂದ್ರ ಕುಮಾರ್, ಸೇರಿದಂತೆ ವಿವಿಧ ಜೈನ ಬಸದಿಗಳ ಅಧ್ಯಕ್ಷರು, ಪದಾಧಿಕಾರಿಗಳು ,ಪುರೋಹಿತರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಹಸ್ತ್ರ ಸಹಸ್ತ್ರ ಸಂಖ್ಯೆಯಲ್ಲಿ ಜಿನ ಬಂದುಗಳು ದೇಶದ ವಿವಿಧಡೆಗಳಿಂದ ಆಗಮಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx